Saturday, June 6, 2026
Homeಕರಾವಳಿಬೆಳ್ತಂಗಡಿ: ಲಾಯಿಲದಲ್ಲಿ ಅನಾರೋಗ್ಯದಿಂದ ಯುವಕ ಸಾವು

ಬೆಳ್ತಂಗಡಿ: ಲಾಯಿಲದಲ್ಲಿ ಅನಾರೋಗ್ಯದಿಂದ ಯುವಕ ಸಾವು

- Advertisement -
- Advertisement -

ಬೆಳ್ತಂಗಡಿ: ಅನಾರೋಗ್ಯದಿಂದ ಯುವಕ ಸಾವನ್ನಪ್ಪಿದ ಘಟನೆ ಲಾಯಿಲದಲ್ಲಿ ನಡೆದಿದೆ.ಲಾಯಿಲ ಗ್ರಾಮದ ಅಮನಂಗಡಿ ಎಂಬಲ್ಲಿಯ ಲೂಯಿಸ್ ಪಿಂಟೋ ಅವರ ಪುತ್ರ ಸುನಿಲ್ ರೋಶನ್ ಪಿಂಟೋ (39) ಅವರ ಆರೋಗ್ಯದಲ್ಲಿ ನಿನ್ನೆ ಬೆಳಗ್ಗೆ ಏರುಪೇರು ಉಂಟಾಗಿತ್ತು. ಕೂಡಲೆ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ನಿನ್ನೆ ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ

.‌ವಿದೇಶದಲ್ಲಿ ಉದ್ಯೋಗದಲ್ಲಿದ್ದ ಇವರು ತಂದೆಯ ಮರಣ ನಂತರ ಮನೆಯಲ್ಲಿ ಕೃಷಿಯೊಂದಿಗೆ ಹೈನುಗಾರಿಕೆ ನಡೆಸುತ್ತಿದ್ದರು.ಎಲ್ಲರೊಂದಿಗೆ ಆತ್ಮೀಯತೆಯಿಂದ ಇರುತ್ತಿದ್ದ ಇವರು  ತಾಯಿ ಹಾಗೂ ಪತ್ನಿ ಸೇರಿದಂತೆ ಬಂಧು ವರ್ಗದವರನ್ನು ಅಗಲಿದ್ದಾರೆ.

- Advertisement -

Latest News

error: Content is protected !!