Monday, June 29, 2026
Homeಕರಾವಳಿಬೆಳ್ತಂಗಡಿ : ಚಲಿಸುತ್ತಿದ್ದ ಲಾರಿಯ ಟ್ರಾಲಿ ತುಂಡಾಗಿ ತಪ್ಪಿದ ಭಾರೀ ಅನಾಹುತ

ಬೆಳ್ತಂಗಡಿ : ಚಲಿಸುತ್ತಿದ್ದ ಲಾರಿಯ ಟ್ರಾಲಿ ತುಂಡಾಗಿ ತಪ್ಪಿದ ಭಾರೀ ಅನಾಹುತ

- Advertisement -
- Advertisement -

ಬೆಳ್ತಂಗಡಿ : ಮಂಗಳೂರು-ವಿಲ್ಲು ಪುರಂ ರಾಷ್ಟ್ರೀಯ 73ರ ರಸ್ತೆಯ ಮುಂಡಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬಡ್ತ್ಯಾರು ಎಂಬಲ್ಲಿ ಗುರುವಾರ ಮಧ್ಯಾಹ್ನ ಚಲಿಸುತ್ತಿದ್ದ ಲಾರಿಯ ಟ್ರಾಲಿ ತುಂಡಾಗಿದ್ದು ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ.

ಈ ರಸ್ತೆ ಮೂಲಕ ಬೆಂಗಳೂರಿನಿಂದ ಮಂಗಳೂರಿಗೆ ನಿಗದಿತ ಭಾರದ ಗ್ಲಾಸ್ ವಸ್ತುಗಳನ್ನು ಸಾಗಿಸುತ್ತಿದ್ದ ಲಾರಿ ಅಂಬಡ್ತ್ಯಾರ್ ಸಮೀಪಿಸುತ್ತಿದಂತೆ ಟ್ರಾಲಿ ಮುರಿದು ಚಾಲಕನ ನಿಯಂತ್ರಣ ತಪ್ಪಿತು. ಒಂದೆಡೆ ವಿದ್ಯುತ್ ಕಂಬ ಹಾಗೂ ಸಮೀಪವೆ ಕ್ಯಾಂಟೀನ್  ಕಾರ್ಯನಿರ್ವಹಿಸುತ್ತಿದ್ದು ಲಾರಿ ಇವುಗಳಿಗೆ ಡಿಕ್ಕಿ ಹೊಡೆಯುತ್ತಿದ್ದರೆ ಭಾರಿ ಅನಾಹುತ ಸಂಭವಿಸುತ್ತಿತ್ತು. ಮಧ್ಯಾಹ್ನವಾದ ಕಾರಣ ಕ್ಯಾಂಟೀನ್ ನಲ್ಲಿ ಹತ್ತರಿಂದ ಹದಿನೈದು ಮಂದಿ ಗ್ರಾಹಕರು ಇದ್ದರು. ನಿಯಂತ್ರಣ ತಪ್ಪಿದ ಲಾರಿ ಕ್ಯಾಂಟೀನ್ ಮುಂಭಾಗದವರೆಗೂ ಚಲಿಸಿ ನಿಂತಿದೆ.ಲಾರಿಯ ಟ್ರಾಲಿ ಸಂಪೂರ್ಣ ಮುರಿದು ಧಾರಾಶಾಹಿಯಾಗದಂತೆ ಸ್ಥಳೀಯರು ಮರದ ಕಂಬಗಳನ್ನು ಆಧಾರವಾಗಿ ಇರಿಸಿ, ಘಟನೆಯಿಂದ ಕಂಗಾಲಾಗಿದ್ದ ಚಾಲಕನನ್ನು ಸ್ಥಳೀಯರು ಉಪಚರಿಸಿದರು.

ಹೊಸ ಲಾರಿ ಆಗಿದ್ದು ಇದು ಕೇವಲ ಐದನೇ ಟ್ರಿಪ್ ಆಗಿದೆ ಹಾಗೂ ಯಾವುದೇ ರೀತಿಯ ಓವರ್ ಲೋಡ್ ಕೂಡ ಇಲ್ಲದಿದ್ದರು ಟ್ರಾಲಿ ಮುರಿದಿದೆ ಎಂದು ಚಾಲಕ ತಿಳಿಸಿದ್ದಾನೆ.ಲಾರಿಯ ಟ್ರಾಲಿ ಮುರಿದಿರುವುದನ್ನು ವೀಕ್ಷಿಸಲು ಇತರ ವಾಹನ ಸವಾರರು ರಸ್ತೆಯುದಕ್ಕೂ ವಾಹನ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಯಿತು

- Advertisement -

Latest News

error: Content is protected !!