Monday, June 8, 2026
Homeಕರಾವಳಿಮಹಾತ್ಮ ಗಾಂಧೀಜಿ ರಸಪ್ರಶ್ನೆಯಲ್ಲಿ ಶೌರ್ಯ.ಎಸ್.ವಿ ರಾಜ್ಯಕ್ಕೆ ಪ್ರಥಮಶಾಸಕ ಹರೀಶ್ ಪೂಂಜ ಅಭಿನಂದನೆ

ಮಹಾತ್ಮ ಗಾಂಧೀಜಿ ರಸಪ್ರಶ್ನೆಯಲ್ಲಿ ಶೌರ್ಯ.ಎಸ್.ವಿ ರಾಜ್ಯಕ್ಕೆ ಪ್ರಥಮಶಾಸಕ ಹರೀಶ್ ಪೂಂಜ ಅಭಿನಂದನೆ

- Advertisement -
- Advertisement -

ಬೆಳ್ತಂಗಡಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ 2 ರಲ್ಲಿ 7 ನೇ ತರಗತಿಯಲ್ಲಿ ಓದುತ್ತಿರುವ ಧರ್ಮಸ್ಥಳ ಗ್ರಾಮದ ನಾರ್ಯದ ನಿವಾಸಿ ಶೌರ್ಯ.ಎಸ್.ವಿ ಮಹಾತ್ಮ ಗಾಂಧೀಜಿ ರಸಪ್ರಶ್ನೆಯಲ್ಲಿ ಭಾಗವಹಿಸಿ 87% ಅಂಕ ಗಳಿಸಿ ಕರ್ನಾಟಕ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ.

ಶೌರ್ಯಳು ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ 25 ಕ್ಕಿಂತಲೂ ಹೆಚ್ಚು ಪ್ರಮಾಣ ಪತ್ರ 12 ವರ್ಷದ ಬಾಲಕಿ ಗಳಿಸಿರುವುದು ಕರ್ನಾಟಕ ರಾಜ್ಯದಲ್ಲಿ ಪ್ರಥಮವಾಗಿದೆ.ಈಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಕಲಾಮ್ ವರ್ಡ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಈ ಮೂರು ವೇದಿಕೆಗೆ ಆಯ್ಕೆಯಾಗಿದ್ದು.12 ವರ್ಷದ ಬಾಲಕಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ನಂತಹ ದೊಡ್ಡ ವೇದಿಕೆಗೆ ಆಯ್ಕೆಯಾಗಿ ಹೆತ್ತವರಿಗೆ, ಊರಿನವರಿಗೆ, ಶಾಲೆಗೆ, ಗುರುಗಳಿಗೆ ಕೀರ್ತಿ ತಂದಿದ್ದಾಳೆ ಇವಳ ಸಾಧನೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ ಆಕೆಯ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದ್ದಾರೆ.

- Advertisement -

Latest News

error: Content is protected !!