Wednesday, June 3, 2026
Homeಕರಾವಳಿಬಂಗಾರಪಲ್ಕೆ ಫಾಲ್ಸ್ ಬಳಿ ದುರಂತ: 18 ದಿನ ಕಳೆದರೂ ಪತ್ತೆಯಾಗದ ಸನತ್ ಶೆಟ್ಟಿ ಮನೆಗೆ‌ ಜಿಲ್ಲಾಧಿಕಾರಿ...

ಬಂಗಾರಪಲ್ಕೆ ಫಾಲ್ಸ್ ಬಳಿ ದುರಂತ: 18 ದಿನ ಕಳೆದರೂ ಪತ್ತೆಯಾಗದ ಸನತ್ ಶೆಟ್ಟಿ ಮನೆಗೆ‌ ಜಿಲ್ಲಾಧಿಕಾರಿ ಭೇಟಿ

- Advertisement -
- Advertisement -

ಬೆಳ್ತಂಗಡಿ: ತಾಲೂಕಿನ ಬಂಗಾರ್ ಪಾಲ್ಕೆ ಫಾಲ್ಸ್ ನಲ್ಲಿ ಗುಡ್ಡ ಕುಸಿದು ವಿಧ್ಯಾರ್ಥಿ ಸನತ್ ಶೆಟ್ಟಿ(20) ನಾಪತ್ತೆಯಾಗಿ ಇಂದಿಗೆ 18 ದಿನ ಕಳೆದರೂ ಆತನ ಪತ್ತೆಯಾಗಿಲ್ಲ. ಇನ್ನೂ ಇಂದು ಸನತ್ ಶೆಟ್ಟಿಯ ಉಜಿರೆಯ ಕಾಶಿಬೆಟ್ಟು ಬಳಿಯ ಮನೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಭೇಟಿ ನೀಡಿ ಸ್ವಾಂತನ ನೀಡಿದರು.

ನಂತರ ಅಲ್ಲಿಂದ ಮಲವಂತಿಗೆ ಗ್ರಾಮದ ಎಳನೀರು, ಬಂಗಾರ್ ಪಾಲ್ಕೆ ಫಾಲ್ಸ್ ಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿದರು. ಜೊತೆಯಲ್ಲಿ ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಡಿವೈಎಸ್ಪಿ ವೆಲೆಂಟೈನ್ ಡಿಸೋಜಾ ,ಪುತ್ತೂರು ಎಸಿ ಯತೀಶ್ ಉಳ್ಳಾಲ್ , ಬೆಳ್ತಂಗಡಿ ತಹಶೀಲ್ದಾರ್ ಮಹೇಶ್.ಜೆ, ಅಗ್ನಿ ಶಾಮಕದ ಅಧಿಕಾರಿಗಳು, ಪೊಲೀಸ್ ಇಲಾಖೆ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಸನತ್ ಶೆಟ್ಟಿ ಪತ್ತೆಗಾಗಿ ಬೆಳ್ತಂಗಡಿ ಶಾಸಕರ ಜೊತೆ ಮಾತಾನಾಡಿ ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸನತ್ ಪತ್ತೆಯಾಗುವವರೆಗೆ ಕೆಲಸ ಮಾಡುವುದಾಗಿ ಭರವಸೆಯನ್ನು ಡಿಸಿ ಮಾಡಿದ್ದಾರೆ.

- Advertisement -

Latest News

error: Content is protected !!