Friday, June 27, 2025
Homeತಾಜಾ ಸುದ್ದಿಬೆಳ್ತಂಗಡಿ ಬಿಸಿಎಂ ಹಾಸ್ಟೆಲಿನ 8 ವಿದ್ಯಾರ್ಥಿನಿಯರಿಗೆ ಕೊರೊನಾ ಪಾಸಿಟಿವ್

ಬೆಳ್ತಂಗಡಿ ಬಿಸಿಎಂ ಹಾಸ್ಟೆಲಿನ 8 ವಿದ್ಯಾರ್ಥಿನಿಯರಿಗೆ ಕೊರೊನಾ ಪಾಸಿಟಿವ್

spot_img
- Advertisement -
- Advertisement -

ಬೆಳ್ತಂಗಡಿ: ಬೆಳ್ತಂಗಡಿ ನಗರದ ಹಳೆಕೋಟೆಯಲ್ಲಿರುವ ಖಾಸಗಿ ಕಟ್ಟದಲ್ಲಿರುವ ಸರಕಾರಿ ವಿದ್ಯಾರ್ಥಿನಿಯರ ಬಿಸಿಎಂ ಹಾಸ್ಟೆಲ್ ನಲ್ಲಿ ಎಂಟು ಜನ ವಿದ್ಯಾರ್ಥಿನಿಯರಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಈಗ ತಾಲೂಕಿನ ವಿವಿಧ ಕಾಲೇಜಿನ ಸಹಪಾಠಿಗಳಿಗೆ ಅಂತಹ ಉಂಟಾಗಿದೆ.

ಹಳೆಕೋಟೆ ಬಿಸಿಎಂ ಹಾಸ್ಟೆಲಿನಲ್ಲಿ ಬೇರೆ ಬೇರೆ ಊರಿನಿಂದ ಬಂದು ತಾಲೂಕಿನ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು ನಿನ್ನೆ ಒರ್ವ ವಿದ್ಯಾರ್ಥಿನಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಬಳಿಕ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಇಂದು ಸಂಜೆ ಏಳು ಮಂದಿಗೆ ಪಾಸಿಟಿವ್ ಬಂದಿದೆ ತಕ್ಷಣ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಾಲ್ಕು ಕೋಣೆಯಲ್ಲಿ 70 ಜನ ವಿದ್ಯಾರ್ಥಿನಿಯರು ವಾಸ:
ಬೆಳ್ತಂಗಡಿ ಹಳೆಕೋಟೆಯ ಬಿಸಿಎಂ ಹಾಸ್ಟೆಲಿನಲ್ಲಿ ನಾಲ್ಕು ಕೋಣೆಯಲ್ಲಿ 20 ಜನರಂತೆ ಒಟ್ಟು 70 ಜನ ವಿದ್ಯಾರ್ಥಿನಿಯರು ವಾಸ್ತವ್ಯ ಮಾಡುತ್ತಿದ್ದು ಇದೀಗ ಉಳಿದ ಎಲ್ಲರಿಗೂ ಅತಂಕ ಉಂಟಾಗಿದೆ. ಉಳಿದ ವಿದ್ಯಾರ್ಥಿನಿಯರಿಂದ ಎಲ್ಲಾ ಕಾಲೇಜಿನ ಸಹಪಾಟಿಗಳಿಗೂ ಕೊರೊನಾ ಹರಡಿ ತಾಲೂಕಿಗೂ ಹರಡುವ ಲಕ್ಷಣ ಹೆಚ್ಚಾಗಿದೆ.

ಮಾಜಿ ಶಾಸಕ ವಸಂತ ಬಂಗೇರ ಆಕ್ರೋಶ:
ವಿದ್ಯಾರ್ಥಿನಿಯರಿಗೆ ಕೊರೊನಾ ಹರಡಿದ ಬಗ್ಗೆ ಮಾಹಿತಿ ಅರಿತ ವಸಂತ ಬಂಗೇರರು ಸರಕಾರದ ವೈಫಲ್ಯದಿಂದ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆ ಮಾಡಿ ಸೂಕ್ತ ಎಚ್ಚರಿಕೆ ವಹಿಸಲು ಸೂಚಿಸಿದ್ದಾರೆ. ಇದಲ್ಲದೆ ಬೆಳ್ತಂಗಡಿ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಪೈ ಬಂಗಾಡಿ ಕೂಡ ಸರಕಾರದ ಬೆಜಬ್ದಾರಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -
spot_img

Latest News

error: Content is protected !!