Tuesday, June 9, 2026
Homeಕರಾವಳಿಬೆಳ್ತಂಗಡಿ: ಅಡಿಕೆ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು!..

ಬೆಳ್ತಂಗಡಿ: ಅಡಿಕೆ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು!..

- Advertisement -
- Advertisement -

ಬೆಳ್ತಂಗಡಿ:ಇಲ್ಲಿನ ಮಚ್ಚಿನ ಗ್ರಾಮದಲ್ಲಿ ಇಂದು ಮುಂಜಾನೆ ಓರ್ವ ಅಡಿಕೆ ಕಳ್ಳನನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ವರದಿಯಾಗಿದೆ.ಮಚ್ಚಿನ ಗ್ರಾಮದ ಪುಂಚಪಾದೆಯಲ್ಲಿ 50 ಕೆ.ಜಿ. ಯ 14 ಗೋಣಿ ಅಡಿಕೆ, ಇಬ್ಬರು ಆರೋಪಿಗಳನ್ನು ಸ್ಥಳೀಯರಾದ ಕರಾಟೆ ಕಿಟ್ಟ ಎಂಬುವರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಕಳೆದ ಒಂದೂವರೆ ತಿಂಗಳುಗಳಿಂದ ಪಿಲಿಗೂಡು, ದೇವರುಪಲಿಕೆ ಆಸುಪಾಸಿನಲ್ಲಿ ಅಡಿಕೆ ಕಳ್ಳ ಸಾಗಾಣಿಕೆ ನಡೆಯುತ್ತಿರುವ ಕುರಿತು ವರದಿಯಾಗಿತ್ತು. ಕಳ್ಳರ ಪತ್ತೆಗಾಗಿ ಸ್ಥಳೀಯರೇ ಕಾರ್ಯಾಚರಣೆ ನಡೆಸಿದ್ದಾರೆ. ಇಂದು ಮಚ್ಚಿನ ಪುಂಚಪಾದೆಯಲ್ಲಿ ಅಡಿಕೆ ಗೋಣಿ, ಅಡಿಕೆ ಸುಲಿಯುವ ಮಣೆ ಜೊತೆಗೆ ಆರೋಪಿಗಳು ಸಿಕ್ಕಿಬಿದ್ದಿದ್ದು ಪೊಲೀಸರಿಗೆ ಒಪ್ಪಿಸುವ ವೇಳೆ ಒಬ್ಬ ಪರಾರಿಯಾಗಿದ್ದಾನೆ. ಪೂಂಜಾಲಕಟ್ಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!