Friday, June 5, 2026
Homeತಾಜಾ ಸುದ್ದಿಬ್ರಿಟನ್ ನಿಂದ ಭಾರತಕ್ಕೆ ಬಂದ 22 ಮಂದಿಗೆ ಕೊರೊನಾ ಸೋಂಕು

ಬ್ರಿಟನ್ ನಿಂದ ಭಾರತಕ್ಕೆ ಬಂದ 22 ಮಂದಿಗೆ ಕೊರೊನಾ ಸೋಂಕು

- Advertisement -
- Advertisement -

ನವದೆಹಲಿ : ಇಂಗ್ಲೆಂಡ್‌ನಲ್ಲಿ ಹೊಸ ಕೊರೋನಾ ವೈರಸ್ ಕಾಣಿಸಿಕೊಂಡಿದ್ದು, ಕೊರೊನಾ ಆತಂಕದಲ್ಲಿ ಬ್ರಿಟನ್ ನಿಂದ ಬಂದ 22 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.ಆದರೆ ಈ ಸೋಂಕು ರೂಪಾಂತರಿ ಕೊರೊನಾ ಹೌದೋ ಅಲ್ಲವೋ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ಇಂಗ್ಲೆಂಡ್‌ನಿಂದ ಅಥವಾ ಅದರ ಮೂಲಕ ಭಾರತಕ್ಕೆ ಬಂದ ಈ 22 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಹೆಚ್ಚಿನ ಪರೀಕ್ಷೆಗೆ ಸ್ಯಾಂಪಲ್‌ಗಳನ್ನು ಕಳುಹಿಸಿಕೊಡಲಾಗಿದೆ.

ದೆಹಲಿಯ 11, ಅಮೃತ್‌ಸರ್ 8, ಕೋಲ್ಕತ್ತಾ 2, ಹಾಗೂ ಚೆನ್ನೈ 1 ವ್ಯಕ್ತಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಸದ್ಯ ಭಾರತದ ಯಾವುದೇ ಭಾಗದಲ್ಲಿ ಕೊರೊನಾ ರೂಪಾಂತರಿ ತಳಿಯ ಸೋಂಕು ಕಾಣಿಸಿಕೊಂಡಿಲ್ಲ. ಆದರೆ ಇವರ ಸ್ಯಾಂಪಲ್‌ಗಳ ಫಲಿತಾಂಶ ಏನು ಬರಲಿದೆ ಎಂದು ಇಡೀ ದೇಶ ಕಾಯುತ್ತಿದೆ.

ಭಾರತ ಡಿ.31ರವರೆಗೆ ಇಂಗ್ಲೆಂಡ್‌ಗೆ ವಿಮಾನ ಸೇವೆಯನ್ನು ರದ್ದು ಮಾಡಲಾಗಿದ್ದು, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ.

- Advertisement -

Latest News

error: Content is protected !!