Sunday, June 7, 2026
Homeಕರಾವಳಿಮಹಾಮಳೆ : ಬೆಳ್ತಂಗಡಿ ಪೊಲೀಸ್ ಠಾಣೆಯ ತುರ್ತು ಸ್ಪಂದನ ಸಿಬ್ಬಂದಿ‌ಗಳ ಕಾರ್ಯಾಚರಣೆ.

ಮಹಾಮಳೆ : ಬೆಳ್ತಂಗಡಿ ಪೊಲೀಸ್ ಠಾಣೆಯ ತುರ್ತು ಸ್ಪಂದನ ಸಿಬ್ಬಂದಿ‌ಗಳ ಕಾರ್ಯಾಚರಣೆ.

- Advertisement -
- Advertisement -

ಬೆಳ್ತಂಗಡಿ : ತಾಲೂಕಿನಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಮಹಾಮಳೆಗೆ ನದಿಗಳಲ್ಲಿ ಭೀಕರವಾಗಿ ತುಂಬಿಹರಿಯುತ್ತಿರುವ ನೀರಿನಿಂದ ಜನ ಭಯಭೀತರಾಗಿದ್ದು, ಈ ನಡುವೆ ಕೆಲವು ನದಿಗಳಲ್ಲಿ ಮರಗಳು, ಮರದ ತುಂಡುಗಳು ಬಂದು ನದಿ ಪಾತ್ರಗಳಲ್ಲಿ ಸಿಲುಕಿ ಪ್ರವಾಹ ಭೀಕರತೆ ಸೃಷ್ಟಿಸುತ್ತಿದೆ.

ಈ ಮಳೆಯ ನಡುವೆ ಬೆಳ್ತಂಗಡಿ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಸಂದೇಶ್ ಪಿ. ಜಿ ಮಾರ್ಗದರ್ಶನದಲ್ಲಿ ಉಪನಿರೀಕ್ಷಕ ನಂದಕುಮಾರ್ ನೇತೃತ್ವದ ತುರ್ತು ಸ್ವಂದನ ತಂಡದ ಸಿಬ್ಬಂದಿಗಳಾದ ಪ್ರೋಬೇಷನರಿ ಪಿಎಸ್ಐ ಶರತ್ ಎಮ್.ಎಲ್, ಎಎಸ್ಐ ರಾಮಯ್ಯ ಹೆಗ್ಡೆ, ಹೆಡ್ ಕಾನ್ಟೇಬಲ್ ವೃಷಭ ಜೈನ್ , ಕಾನ್ಟೇಬಲ್ ಗಳಾದ ಕಿರಣ್ ಕುಮಾರ್, ಮಾಲ್ತೇಶ್ , ವೆಂಕಟೇಶ್, ಶಶಿಕುಮಾರ್, ಚರಣ್ ರಾಜ್, ಗುತ್ಯಾಪ್ಪ, ನಾಗರಾಜ್ ಇವರುಗಳು ತಮ್ಮ ಪ್ರಾಣದ ಹಂಗು ತೊರೆದು ದಿಡುಪೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಿಸರದಲ್ಲಿ ತಂಡ ಮೊಕ್ಕಹೂಡಿ, ನದಿ ಮತ್ತು ಹಳ್ಳಕ್ಕೆ ಇಳಿದುನೀರಿನಲ್ಲಿ ಸಿಲುಕಿದ ತಡೆಗಳನ್ನು ತೆರವು ಕಾರ್ಯಾಚಣೆಯಲ್ಲಿ ತೋಡಗಿಕೊಂಡಿದ್ದಾರೆ.

- Advertisement -

Latest News

error: Content is protected !!