Wednesday, June 26, 2024
Homeಕರಾವಳಿಉಡುಪಿಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ 1 ಲಕ್ಷ ರೂಪಾಯಿ‌ ದೇಣಿಗೆ ನೀಡಿದ ಭಿಕ್ಷುಕಿ

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ 1 ಲಕ್ಷ ರೂಪಾಯಿ‌ ದೇಣಿಗೆ ನೀಡಿದ ಭಿಕ್ಷುಕಿ

spot_img
- Advertisement -
- Advertisement -

ಮುಲ್ಕಿ; ಇಲ್ಲಿನ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭಿಕ್ಷುಕಿಯೊಬ್ಬರು 1 ಲಕ್ಷ ರೂಪಾಯಿ‌ ದೇಣಿಗೆ ನೀಡಿದ್ದಾರೆ.

ಕುಂದಾಪುರ ತಾಲೂಕಿನ ಸಾಲಿಗ್ರಾಮದಲ್ಲಿ ವಾಸವಿದ್ದ 80 ವರ್ಷದ ವೃದ್ಧೆ ಅಶ್ವತ್ಥಮ್ಮ ಎಂಬುವರು ಹಲವು ವರ್ಷಗಳಿಂದ ದೇವಸ್ಥಾನದ ಟೋಲ್‌ಗೇಟ್‌ ಬಳೀ ಭಿಕ್ಷೆ ಬೇಡಿ ಸಂಗ್ರಹಿಸಿದ ಹಣವನ್ನು ಉಳಿಸಿ ದೇವಸ್ಥಾನಗಳಲ್ಲಿ ಅನ್ನದಾನ ಕಾರ್ಯಕ್ರಮಕ್ಕೆ ಕೊಡುಗೆಯಾಗಿ ನೀಡುತ್ತಾ ಬಂದಿದ್ದಾರೆ.

ಅಯ್ಯಪ್ಪ ವ್ರತಧಾರಿಯಾಗಿ ಶಬರಿಮಲೆ ಅಯ್ಯಪ್ಪ ಸನ್ನಿಧಾನಕ್ಕೆ ಹೋದಾಗ ಎರಿಮಲೆ ಪಂಪಾ ಸನ್ನಿಧಾನದಲ್ಲಿ ಅನ್ನದಾನಕ್ಕೆ ರು. 1.5 ಲಕ್ಷ ಕೊಡುಗೆ ನೀಡಿದ್ದಾರೆ. ನಂತರ ಇದರೆ ರೀತಿ ಗಂಗೊಳ್ಳಿಯ ದೇವಸ್ಥಾನಕ್ಕೆ 1 ಲಕ್ಷ,ಕಂಚುಗೋಡು ಕುಂದಾಪುರ ದೇವಳಕ್ಕೆ 1 ಲಕ್ಷ, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಳಕ್ಕೆ ಅನ್ನದಾನಕ್ಕೆ 1 ಲಕ್ಷ,ಪೊಳಲಿಯ ಅಖಿಲೇಶ್ವರಿ ದೇವಸ್ಥಾನಕ್ಕೆ 1 ಲಕ್ಷ ರೂ ದೇಣಿಗೆ ನೀಡಿದ್ದಾರೆ.ಸೋಮವಾರ ಮು ಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿ ದೇವಸ್ಥಾನಕ್ಕೆ ಅನ್ನದಾನಕ್ಕೆಂದು 1 ಲಕ್ಷ ದೇಣಿಗೆಯಾಗಿ ನೀಡಿದ್ದಾರೆ. ಇದುವರೆಗೂ 9 ಲಕ್ಷ ರೂಪಾಯಿಗಳನ್ನು ಅಶ್ವತ್ಥಮ್ಮ ದೇಗುಲಗಳಿಗೆ ನೀಡಿದ್ದಾರೆ.

- Advertisement -
spot_img

Latest News

error: Content is protected !!