Friday, June 5, 2026
Homeಅಪರಾಧಮೂಡುಬಿದಿರೆ: ಗೋಣಿಚೀಲದಲ್ಲಿ ದನದ ರುಂಡ ಪತ್ತೆ- ಆರೋಪಿಗಳನ್ನು ಬಂಧಿಸದಿದ್ದಲ್ಲಿ ಠಾಣೆಗೆ ಮುತ್ತಿಗೆ ಹಾಕಲಾಗುವುದಾಗಿ ಎಚ್ಚರಿಕೆ ನೀಡಿದ...

ಮೂಡುಬಿದಿರೆ: ಗೋಣಿಚೀಲದಲ್ಲಿ ದನದ ರುಂಡ ಪತ್ತೆ- ಆರೋಪಿಗಳನ್ನು ಬಂಧಿಸದಿದ್ದಲ್ಲಿ ಠಾಣೆಗೆ ಮುತ್ತಿಗೆ ಹಾಕಲಾಗುವುದಾಗಿ ಎಚ್ಚರಿಕೆ ನೀಡಿದ ಹಿಂ.ಜಾ.ವೇ

- Advertisement -
- Advertisement -

ಮೂಡುಬಿದಿರೆ: ತಾಲೂಕಿನ ಪುರಸಭಾ ವ್ಯಾಪ್ತಿಯ ಕೀರ್ತಿನಗರದ ರಸ್ತೆ ಬದಿಯಲ್ಲಿ ದನದ ರುಂಡ ಗೋಣಿಚೀಲದಲ್ಲಿ ಪತ್ತೆಯಾದ ಘಟನೆ ಇಂದು ಬೆಳಗ್ಗೆ ಪೊಲೀಸರ ಗಮನಕ್ಕೆ ಬಂದಿದೆ.

ಯಾರೋ ಕಿಡಿಗೇಡಿಗಳು ನಿನ್ನೆ ರಾತ್ರಿ ವೇಳೆ ಪ್ಲಾಸ್ಟಿಕ್ ಚೀಲವೊಂದರಲ್ಲಿ ರುಂಡವನ್ನು ತುಂಬಿಸಿ ತಂದು ಇಲ್ಲಿ ತಂದು ಬಿಸಾಡಿ ಹೋಗಿರಬಹುದೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

ರುಂಡವನ್ನು ಪೊಲೀಸರು ಸ್ಥಳದಿಂದ ತೆರವುಗೊಳಿಸಿದ್ದಾರೆ. ಕಿಡಿಗೇಡಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಘಟನೆಯ ಬಗ್ಗೆ, ಮೂಡಬಿದಿರೆ ತಾಲೂಕು ಹಿಂದೂ ಜಾಗರಣ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ. ಆರೋಪಿಗಳನ್ನು 48 ಗಂಟೆಯ ಒಳಗೆ ಬಂಧಿಸದಿದ್ದಲ್ಲಿ ಠಾಣೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

- Advertisement -

Latest News

error: Content is protected !!