Wednesday, May 15, 2024
Homeತಾಜಾ ಸುದ್ದಿಕೊರೊನಾದಿಂದ ಮೃತರಾದ 450 ಕ್ಕೂ ಹೆಚ್ಚು ಶವಗಳ ದಫನ್ ಮಾಡಿದಾತನಿಗೆ' ಸಮಾಜದಿಂದ ಅಘೋಷಿತ ಬಹಿಷ್ಕಾರ'!

ಕೊರೊನಾದಿಂದ ಮೃತರಾದ 450 ಕ್ಕೂ ಹೆಚ್ಚು ಶವಗಳ ದಫನ್ ಮಾಡಿದಾತನಿಗೆ’ ಸಮಾಜದಿಂದ ಅಘೋಷಿತ ಬಹಿಷ್ಕಾರ’!

spot_img
- Advertisement -
- Advertisement -

ಗೌಹಾಟಿ: ಕೋವಿಡ್ ವೈರಸ್‌ನಿಂದ ಸಮಾಜದ ಆಗು ಹೋಗುಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಜನರು ತಮ್ಮ ನೆರಳನ್ನೇ ನಂಬಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಪುಷ್ಟಿ ನೀಡುವ ಅಮಾನವೀಯ ಘಟನೆಯ ವಿವರ ಇಲ್ಲಿದೆ. ಕೊರೊನಾದಿಂದ ಮೃತರಾದ 450 ಕ್ಕೂ ಹೆಚ್ಚು ಶವಗಳನ್ನು ರಾಮಚಂದ್ರ ಸರ್ಕಾರ್ ಅಂತ್ಯಸಂಸ್ಕಾರ ಮಾಡಿದ್ದಾರೆ.ಈ ಕಾರಣಕ್ಕಾಗಿ ಜನ ಇವರನ್ನು ಹತ್ತಿರ ಸೇರಿಸುತ್ತಿಲ್ಲ.

ಈಶಾನ್ಯ ಭಾರತದ ರಾಜ್ಯ ಅಸ್ಸಾಂನಲ್ಲಿ ಕೊರೊನಾ ರೋಗದಿಂದ ಮೃತಪಟ್ಟವರ ಶವ ಸಂಸ್ಕಾರ ನೆರವೇರಿಸುತ್ತಿರುವ ರಮಾನಂದ ಸರ್ಕಾರ್ ಎಂಬ ವ್ಯಕ್ತಿಯ ಕರುಣಾಜನಕ ಕಥೆಯಿದು.ಸಂಸ್ಕಾರಕಾರ್ಯ ಮಾಡಿದ್ದಕ್ಕೆ ಅವರ ಮನೆಯ ಮಾಲೀಕ ಅವರನ್ನು ಹೊರ ಹಾಕಿದ್ದಾನೆ. ಅವರು ಸ್ವ ಗ್ರಾಮಕ್ಕೆ ಹೋಗದೇ ಎಷ್ಟೋ ತಿಂಗಳು ಕಳೆದಿದೆ. ಪತ್ನಿ ಮಕ್ಕಳನ್ನೂ ಭೇಟಿಯಾಗುತ್ತಿಲ್ಲ.

“ಜನ ನನ್ನನ್ನೇಕೆ ಬಹಿಷ್ಕಾರ ಮಾಡುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ನಾನಲ್ಲದೇ ಈ ಕಾರ್ಯವನ್ನು ಇನ್ನಾರು ಮಾಡುತ್ತಾರೆ…” .ಮೇ ಮೊದಲ ವಾರದಲ್ಲಿ ಎಂದಿನಂತೆ ಒಬ್ಬ ಮಹಿಳೆಯ ಶವ ಅಂತ್ಯಸಂಸ್ಕಾರ ನೆರವೇರಿಸಿದರು. ಆಕೆಗೆ ಕೋರೋಣ ಇದ್ದ ಕಾರಣಕ್ಕೆ ರಾಜ್ಯ ಆಡಳಿತ ಅವರನ್ನು ಕ್ವಾರಂಟೈನ್‌ನಲ್ಲಿ ಇರಿಸಿತು. ಆದರೆ, ನಂತರ ಅವರ ಕೆಲಸಕ್ಕೆ ಬೇರ‍್ಯಾರೂ ಸಿಕ್ಕಿಲ್ಲ. ಇದರಿಂದ ಸ್ಥಳೀಯ ಆಡಳಿತ ಕೋವಿಡ್ 19 ನಿಂದ ಮೃತರಾದವರ ಅಂತ್ಯಸಂಸ್ಕಾರಕ್ಕೆ ಪ್ರತ್ಯೇಕ ಸ್ಥಳ ಗುರುತಿಸಿ ಅಲ್ಲಿಗೆ ರಮಾನಂದ ಸರ್ಕಾರ್ ಅವರನ್ನು ನೇಮಿಸಿದೆ.

- Advertisement -
spot_img

Latest News

error: Content is protected !!