Monday, May 6, 2024
Homeತಾಜಾ ಸುದ್ದಿಬೆಂಗಳೂರಿನಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕಾಗಿ 48 ಸ್ಥಳಗಳ ಆಯ್ಕೆ

ಬೆಂಗಳೂರಿನಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕಾಗಿ 48 ಸ್ಥಳಗಳ ಆಯ್ಕೆ

spot_img
- Advertisement -
- Advertisement -

ಬೃಹತ್ ಬೆಂಗಳೂರು‌ ಮಹಾನಗರ ಪಾಲಿಕೆ (ಬಿಬಿಎಂಪಿ) ಬೆಂಗಳೂರಿಲ್ಲಿನ ಶೌಚಾಲಯ ಸಮಸ್ಯೆ ನೀಗಿಸುವ ಸಲುವಾಗಿ ಹೊಸದಾಗಿ 48 ಕಡೆ ಸಾರ್ವಜನಿಕ ಶೌಚಾಲಯಗಳ ನಿರ್ಮಾಣಕ್ಕೆ ಮುಂದಾಗಿದೆ.ಬಯಲು ಶೌಚ ತಡೆಯುವ ಸಲುವಾಗಿ ಬಿಬಿಎಂಪಿ ಶೌಚಾಲಯಗಳ ನಿರ್ಮಾಣಕ್ಕೆ ಒತ್ತು ನೀಡುತ್ತಿದೆ.

ಪ್ರಸ್ತುತ ನಗರದಲ್ಲಿ ಬಿಬಿಎಂಪಿ ದಾಖಲೆ ಪ್ರಕಾರ, 478ಕ್ಕೂ ಹೆಚ್ಚು ಸಾರ್ವಜನಿಕ ಶೌಚಾಲಯಗಳಿವೆ. ಆದರೆ, ಅದರಲ್ಲಿ 100ಕ್ಕೂ ಹೆಚ್ಚಿನ ಶೌಚಾಲಯಗಳು ನಿರ್ವಹಣೆ ಕೊರತೆಯಿಂದ ಸ್ಥಗಿತಗೊಂಡಿವೆ.₹ 31.187 ಕೋಟಿ ವೆಚ್ಚದಲ್ಲಿ 48 ಶೌಚಾಲಯ ನಿರ್ಮಾಣಬಿಬಿಎಂಪಿ ರೂಪಿಸಿರುವ ಯೋಜನೆಯಂತೆ ₹ 31.187ಕೋಟಿ ವೆಚ್ಚದಲ್ಲಿ ನಗರದ 48 ಕಡೆ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಇನ್ನು ಶೌಚಾಲಯವು ಮಹಿಳೆ ಮತ್ತು ಪುರುಷರು ಬಳಸುವಂತೆ ವ್ಯವಸ್ಥಿತವಾಗಿರಲಿದೆ. ಶೌಚಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರನ್ನು ನೇಮಿಸಲು ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಗುತ್ತಿಗೆ ಪಡೆಯುವವರು ಶೌಚಾಲಯ ನಿರ್ಮಾಣದ ಜತೆಗೆ 5 ವರ್ಷಗಳ ಕಾಲ ನಿರ್ವಹಣೆ ಮಾಡಬೇಕಿದೆ.

ಬಿಬಿಎಂಪಿ ಸಾರ್ವಜನಿಕ ಶೌಚಾಲಯ ನಿರ್ಮಿಸುವ ಯೋಜನೆಯ ಮುಖೇನ ಸ್ವಚ್ಛ ಭಾರತ ಅಭಿಯಾನದಂತೆ ನಗರವನ್ನು ಬಯಲು ಶೌಚ ಮುಕ್ತವಾಗಿಸುವ ಗುರಿಯನ್ನ ಹೊಂದಿದೆ. ಅದಕ್ಕಾಗಿ ಶೌಚಾಲಯಗಳನ್ನು ರಸ್ತೆ ಬದಿಯ ಮಾನದಂಡ ಅನುಸರಿಸಿ ನಿರ್ಮಿಸುವಂತೆ ಗುತ್ತಿಗೆದಾರರಿಗೆ ಷರತ್ತು ವಿಧಿಸಲಾಗುತ್ತಿದೆ.

- Advertisement -
spot_img

Latest News

error: Content is protected !!