Friday, June 26, 2026
Homeಕರಾವಳಿಆಗಸ್ಟ್ 23 ರಿಂದ ಸುಳ್ಳಮಲೆ ಗುಹತೀರ್ಥ ಸ್ನಾನ

ಆಗಸ್ಟ್ 23 ರಿಂದ ಸುಳ್ಳಮಲೆ ಗುಹತೀರ್ಥ ಸ್ನಾನ

- Advertisement -
- Advertisement -

ಬಂಟ್ವಾಳ: ವರ್ಷಂಪ್ರತಿ ನಡೆಯುವ ಐತಿಹಾಸಿಕ ಧಾರ್ಮಿಕ ಹಿನ್ನೆಲೆಯುಳ್ಳ ಸುಳ್ಳಮಲೆ ಗುಹಾತೀರ್ಥ ಸ್ನಾನವು ದಿನಾಂಕ 23-08-2025 ನೇ ಶನಿವಾರದಿಂದ ದಿನಾಂಕ 27-08-2025 ನೇ ಬುಧವಾರದ ಭಾದ್ರಪದ ಶುಕ್ಲ ಚೌತಿಯವರಗೆ ಜರಗಲಿದೆ.

ಸೋಣ ಅಮಾವಾಸ್ಯೆಯಂದು ಬಿದಿರಿನ ಕೇರ್ಪು (ಏಣಿ) ಇಡುವ ಸಂಪ್ರದಾಯದ ಬಳಿಕ ಅರಸು ಶ್ರೀ ಗುಡ್ಡೆಚಾಮುಂಡಿ ಮತ್ತು ಪ್ರಧಾನಿ ಶ್ರೀ ಪಂಜುರ್ಲಿ ದೈವಗಳಿಗೆ ತಂಬಿಲ ಸೇವೆ ನಡೆದ ನಂತರ ಭಕ್ತಾದಿಗಳಿಗೆ ತೀರ್ಥ ಸ್ನಾನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

ತೀರ್ಥ ಸ್ನಾನಕ್ಕೆ ಬರುವ ಭಕ್ತಾದಿಗಳು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿಕೊಂಡು ಬರುವ ಮೂಲಕ ತೀರ್ಥ ಕ್ಷೇತ್ರದ ಪಾವಿತ್ರ್ಯತೆಯನ್ನು ಕಾಪಾಡಬೇಕಾಗಿ ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಮಾಣಿಗುತ್ತು ಆಡಳಿತ ಮೊಕ್ತಸರ ಸಚಿನ್ ರೈ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!