- Advertisement -
- Advertisement -
ಉಪ್ಪಿನಂಗಡಿ: ಗಣರಾಜ್ಯೋತ್ಸವದ ಅಂಗವಾಗಿ ಎಲ್ಲೆಡೆಯೂ ಆಚರಣೆ ನಡೆದಿದೆ. ಆದರೆ ಉಪ್ಪಿನಂಗಡಿ ಸಮೀಪದ ಬಾರ್ಯ ಗ್ರಾಮ ಪಂಚಾಯತಿ ನಲ್ಲಿ ಧ್ವಜಾರೋಹಣ ಮಾಡದೆ ನಿರ್ಲಕ್ಷಿಸಿದ ಘಟನೆ ನಡೆದಿದೆ.
ಈ ಘಟನೆಯ ಕುರಿತು ಪ್ರತಿಕ್ರಿಯಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಶಾ ಶರತ್ ಅವರು ಮಾತನಾಡಿ “ನನಗೆ ಗಣರಾಜ್ಯೋತ್ಸವ ಬಾಪ್ತು ಧ್ವಜಾರೋಹಣ ಮಾಡುವ ಕುರಿತು ಯಾವುದೇ ಮಾಹಿತಿ ಇರಲಿಲ್ಲ, ಜೊತೆಗೆ ಪಂಚಾಯತ್ ಪಿಡಿಓ ಕೂಡ ಈ ಕುರಿತು ಯಾವುದೇ ಮಾಹಿತಿ ನೀಡಿರಲಿಲ್ಲ. ಹಿಂದಿನ ವರ್ಷ ಕೂಡ ಧ್ವಜಾರೋಹಣ ಮಾಡದೆ ಯಾವುದೇ ಆಚರಣೆ ಮಾಡಿರಲಿಲ್ಲ ಎಂಬ ಮಾಹಿತಿ ಇತ್ತು. ಈ ಕಾರಣ ಈ ವರ್ಷವೂ ಧ್ವಜಾರೋಹಣ ನಡೆಸಲಿಲ್ಲ ಎಂದು ಮಾಧ್ಯಮದ ಜೊತೆ ಮಾತುಕತೆ ನಡೆಸಿದ್ದಾರೆ.
- Advertisement -