Sunday, June 29, 2025
Homeಮನರಂಜನೆವೇಶ್ಯಾವಾಟಿಕೆ, ಬಾರ್‌ ಡ್ಯಾನ್ಸರ್‌ ಆಗಿದ್ದಾಕೆ ಈಗ ಸ್ಟಾರ್‌ ಬರಹಗಾರ್ತಿ...

ವೇಶ್ಯಾವಾಟಿಕೆ, ಬಾರ್‌ ಡ್ಯಾನ್ಸರ್‌ ಆಗಿದ್ದಾಕೆ ಈಗ ಸ್ಟಾರ್‌ ಬರಹಗಾರ್ತಿ…

spot_img
- Advertisement -
- Advertisement -

ನಾಳೆಯ ನಿರೀಕ್ಷೆಯಲ್ಲಿ ಬದುಕುವ ಮನುಷ್ಯನ ಜೀವನ ಯಾವಾಗ ಯಾವ ರೀತಿಯ ತಿರುವು ಪಡೆದುಕೊಳ್ಳುತ್ತದೆಯೋ ತಿಳಿಯದು. ನಾಳೆಯ ಸಂಗತಿ ಏನು ಅನ್ನೋದು ಗೊತ್ತೇ ಇರುವುದಿಲ್ಲ. ಓರ್ವ ಖ್ಯಾತ ಬರಹಗಾರ್ತಿ ವಿಷಯದಲ್ಲೂ ಆಗಿದ್ದೂ ಇದೇ. ತುತ್ತಿನ ಬುತ್ತಿ ತುಂಬಿಕೊಳ್ಳಲು ಮೊದಲು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದು, ನಂತರ ಬಾರ್ ಡ್ಯಾನ್ಸರ್​ ಕೆಲಸದಿಂದ, ಕಡೆಗೆ ಬಿ-ಟೌನ್​ನ ಯಶಸ್ವೀ ಸಿನಿಮಾ ಬಹರಗಾರ್ತಿಯಾದರು.

ಆ ಖ್ಯಾತ ಸಿನಿಮಾ ಬರಹಗಾರ್ತಿ ಮತ್ತಾರೂ ಅಲ್ಲ ಶಗುಫ್ತಾ ರಫೀಕ್​. ಮ್ಯೂಸಿಕಲ್​ ಹಿಟ್​ ಸಿನಿಮಾ ಆಶಿಕಿ 2ಗೆ ಕತೆ ಬರೆದದ್ದು ಇದೇ ಶಗುಫ್ತಾ. ಸಿನಿಮಾ ನೋಡಿದ ಸಾಕಷ್ಟು ಮಂದಿ ಕಣ್ಣೀರಿಡುತ್ತಾ ಹೊರ ಬಂದವರಿಗೆ ಈ ಕತೆ ಬರೆದ ಬರಹಗಾರ್ತಿಯ ಜೀವನದ ಬಗ್ಗೆ ಗೊತ್ತೇ ಇಲ್ಲವೆನಿಸುತ್ತದೆ.

ಶಗುಫ್ತಾಗೆ ನಿಜಕ್ಕೂ ತನ್ನ ಪೋಷಕರು ಯಾರು ಎಂಬುದು ಗೊತ್ತಿಲ್ಲವಂತೆ. ಈಕೆಯನ್ನು ಒಬ್ಬಳು ಮಹಿಳೆ ದತ್ತು ತೆಗೆದುಕೊಂಡಿದ್ದು, ಆಕೆಗೆ ಕೋಲ್ಕತಾ ಮೂಲದ ಉದ್ಯಮಿಯೊಬ್ಬರ ಜತೆ ಸಂಬಂಧವಿತ್ತು. ಆತನ ಸಾವಿನ ನಂತರ ಕುಟುಂಬದ ಜವಾಬ್ದಾರಿ ಶುಗುಫ್ತಾ ಮೇಲೆ ಬಿದ್ದಿತ್ತು. ಉದ್ಯಮಿಯ ಸಾವಿನಿಂದ ಇಡೀ ಕುಟುಂಬ ಬಡತನದಿಂದ ಕಾಲ ಕಳೆಯುವಂತೆ ಮಾಡಿತ್ತು. ಹೀಗಾಗಿ 11 ವಯಸ್ಸಿಗೆ ಶಗುಫ್ತಾ ಖಾಸಗಿ ಪಾರ್ಟಿಗಳಲ್ಲಿ ಡ್ಯಾನ್ಸ್ ಮಾಡಿ ಅವರು ಎಸೆಯುವ ಹಣದಿಂದ ಹೊಟ್ಟೆ ಹೊರೆದುಕೊಳ್ಳುತ್ತಿದ್ದರಂತೆ!

ಸಾಕು ತಾಯಿ ಶಗುಫ್ತಾಳಿಗೆ ಶಾಸ್ತ್ರೀಯ ನೃತ್ಯಾಭ್ಯಾಸ ಮಾಡಿಸಿದ್ದರಂತೆ ಯಾಕೆಂದರೆ ಒಂದಲ್ಲಾ ಒಂದು ದಿನ ಬಾಲಿವುಡ್ ನಲ್ಲಿ ಆಕೆ ಮಿಂಚಬೇಕು ಎಂಬ ಆಸೆ ಇತ್ತಂತೆ. ಶಗುಫ್ತಾ 17ನೇ ವಯಸ್ಸಿಗೆ ಐಶಾರಾಮಿ ವ್ಯಕ್ತಿಯೊಬ್ಬನನ್ನು ವರಿಸಿದ್ದು ಆತನಿಂದ ಆರ್ಥಿಕ ನೆರವು ಪಡೆಯುತ್ತಿದ್ದರಂತೆ. ಆದರೆ ಆತನ ಜತೆಗಿನ ಸಂಬಂಧ ಹಳಸಿದ್ದರಿಂದ ಆತನನ್ನು ಬಿಟ್ಟು ವೇಶ್ಯಾವಾಟಿಕೆಗೆ ಶಗುಫ್ತಾ ಇಳಿದುಬಿಟ್ಟಿರುವುದಾಗಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ನಂತರ ಕೆಲ ಸಮಯ ಬಾರ್​ ಡ್ಯಾನ್ಸರ್​ ಹಾಗೂ ಖಾಸಗಿ ಪಾರ್ಟಿಗಳಲ್ಲಿ ನೃತ್ಯ ಮಾಡುತ್ತಿದ್ದರಂತೆ. ನಂತರ ಡ್ಯಾನ್ಸರ್​ ಆಗಿಯೇ ದುಬೈಗೆ ಹೋಗಿದ್ದರಂತೆ. ಬಾರ್ ಡ್ಯಾನ್ಸರ್ ಆಗಿದ್ದ ಸಮಯದಲ್ಲೇ ಭೇಟಿ ಮಾಡಿದವರ ಕತೆಗಳನ್ನು ಬರೆಯುತ್ತಿದ್ದರಂತೆ. ಟಿವಿ ಶೋ ಹಾಗೂ ಪ್ರೊಡಕ್ಷನ್​ ಹೌಸ್​ಗಳಲ್ಲಿ ಬರಹಗಾರ್ತಿಯಾಗಿ ಸೇರಲು ತುಂಬಾ ಶ್ರಮಿಸಿದ್ದರಂತೆ. ಆದರೆ ಕಡೆಗೆ 2000ದಲ್ಲಿ ಆ ಅವಕಾಶ ಮಹೇಶ್​ ಭಟ್​ ಅವರ ಮೂಲಕ ಸಿಕ್ಕಿತ್ತು.

ಸಿನಿಮಾಗಳಲ್ಲಿ ಡೈಲಾಗ್ ಬರೆಯುತ್ತಾ… ಸ್ಕ್ರೀನ್​ ಪ್ಲೇ ಬರೆಯುತ್ತಲೇ ಹಂತ ಹಂತವಾಗಿ ಬೆಳೆದ ಶಗುಫ್ತಾ ನಂತರ ಯಶಸ್ವೀ ಬರಹಗಾರ್ತಿಯಾದವರು. 2006ರಲ್ಲಿ ವೊ ಲಹ್ಮೆ ಸಿನಿಮಾದಲ್ಲಿ ಮೊದಲ ಬಾರಿಗೆ ಕೆಲಸ ಮಾಡಿದರು. ಜನ್ನತ್​ 2, ರಾಝ್​ 3ಡಿ ಹಾಗೂ ಆಶಿಕಿ 2ಗೆ ಕತೆ ಬರೆದಿದ್ದಾರೆ. ಉಳಿದಂತೆ ಇನ್ನೂ ಹಲವಾರು ಸಿನಿಮಾಗಳಿಗೆ ಅಂದರೆ 11 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇದೇ ಶಾಗುಫ್ತಾ ಅವರ ಹೆಸರು ಸ್ಯಾಂಡಲ್​ವುಡ್​ನಲ್ಲೂ ಕೇಳಿ ಬಂದಿತ್ತು. ಕನ್ನಡದ ಒಂದು ಸಿನಿಮಾಗೆ ಇವರೇ ಕತೆ ಬರೆಯಲಿದ್ದಾರೆ ಎಂದೂ ಹೇಳಲಾಗುತ್ತಿತ್ತು.

- Advertisement -
spot_img

Latest News

error: Content is protected !!