Thursday, July 16, 2026
Homeಕರಾವಳಿಬಂಟ್ವಾಳ: ನೇತ್ರಾವತಿ ನದಿಯಲ್ಲಿ ಮುಳುಗಿ ಬಾಲಕ ಸಾವು

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಮುಳುಗಿ ಬಾಲಕ ಸಾವು

- Advertisement -
- Advertisement -

ಬಂಟ್ವಾಳ; ನೇತ್ರಾವತಿ ನದಿಯಲ್ಲಿ ಮುಳುಗಿ ಬಾಲಕ ಸಾವನ್ನಪ್ಪಿರುವ ಘಟನೆ ಪೆರ್ನೆ ನೇತ್ರಾವತಿ ಬಿಳಿಯೂರು ಬಳಿ ನಡೆದಿದೆ.ತ್ವಾಹಿರ್ ಅವರ ಪುತ್ರ ಸಲ್ಮಾನ್(16) ಮೃತ ಬಾಲಕ.


ಈತ ಮನೆಯಿಂದ ಟ್ಯೂಷನ್ ಗೆ ತೆರಳಿದ್ದು, ಅಲ್ಲಿಂದ ಗೆಳೆಯನ ಜೊತೆ ಪೆರ್ನೆ ನದಿಗೆ ತೆರಳಿದ್ದು, ನದಿಗಿಳಿದಾಗ ಸಲ್ಮಾನ್ ನೀರುಪಾಲಾಗಿದ್ದಾನೆ. ಬಳಿಕ ಊರವರು ಮೃತದೇಹವನ್ನು ಮೇಲಕ್ಕೆ ಎತ್ತಿದ್ದಾರೆ. ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.ಇನ್ನೋರ್ವ ಬಾಲಕನ ರಕ್ಷಣೆ ಮಾಡಲಾಗಿದೆ.

ಮಾಣಿ ನಿವಾಸಿಯಾಗಿರುವ ಸಲ್ಮಾನ್ ಅವರ ತಂದೆ ಇತ್ತೀಚೆಗೆ ಮೃತಪಟ್ಟಿದ್ದಾರೆ.ಇದೀಗ ಸಲ್ಮಾನ್ ನಿಧನದಿಂದ ಕುಟುಂಬದ ರೋಧನ ಮುಗಿಲು ಮುಟ್ಟಿದೆ.

- Advertisement -

Latest News

error: Content is protected !!