Friday, June 26, 2026
Homeಕರಾವಳಿಬಂಟ್ವಾಳ: ಅನಾರೋಗ್ಯದಿಂದ ಬಾಲಕ ಸಾವು

ಬಂಟ್ವಾಳ: ಅನಾರೋಗ್ಯದಿಂದ ಬಾಲಕ ಸಾವು

- Advertisement -
- Advertisement -

ಬಂಟ್ವಾಳ: ಅನಾರೋಗ್ಯದಿಂದ ಬಾಲಕನೊಬ್ಬ  ಸಾವನ್ನಪ್ಪಿರುವ ಘಟನೆ ಬಂಟ್ವಾಳ ತಾಲೂಕಿನ ನರಿಕೊಂಬು ಎಂಬಲ್ಲಿ ನಡೆದಿದೆ.ನರಿಕೊಂಬು ನಾಟಿ ನಿವಾಸಿ ಹಿರಿಯ ವಕೀಲರಾದ ಶ್ರೀನಿವಾಸ ದೈಪಲ ಪುತ್ರ ಶಿಶಿರ್ ಅನಾರೋಗ್ಯದಿಂದ ಬಳಲುತ್ತಿದ್ದು, ಜೂನ್ 16 ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಕಳೆದ ವರ್ಷ ಶಿಶೀರ್ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಶಿಶಿರ್, ಶಾಲೆಯಲ್ಲಿರುವಾಗಲೇ ಕುಸಿದು ಬಿದ್ದಿದ್ದ.ಆ ಬಳಿಕ ಈತನನ್ನು ಆಸ್ಪತ್ರೆಗೆ ದಾಖಲಿಸಿ ಪರೀಕ್ಷೆ ನಡೆಸಿದಾಗ ಬ್ರೈನ್ ಸಂಬಂಧಿಸಿದ ಕಾಯಿಲೆ ಇರೋದು ಗೊತ್ತಾಗಿತ್ತು.

ಅಂದಿನಿಂದಲೇ ಕಾಯಿಲೆಗೆ ಚಿಕಿತ್ಸೆ ನಡೆಯುತ್ತಿತ್ತು. ತರಗತಿಗೆ ಹಾಜರಾಗಲು ಅಸಾಧ್ಯವಾದರೂ ಶಿಶಿರ್ ಎಸ್.ಎಸ್. ಎಲ್.ಸಿ.ಪರೀಕ್ಷೆ ಬರೆದಿದ್ದು ಪರೀಕ್ಷೆಯಲ್ಲಿ ಶೇ.75 ಅಂಕಗಳನ್ನು ಪಡೆದುಕೊಂಡಿದ್ದ.

ಆರೋಗ್ಯ ದಲ್ಲಿ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಪಿ.ಯುಸಿ ಗೆ ದಾಖಲಾತಿ ಮಾಡಿರಲಿಲ್ಲ. ಮತ್ತೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕ ಶಿಶಿರ್ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕವನ್ನು ತ್ಯಜಿಸಿದ್ದಾನೆ. ಶಿಶಿರ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದ.

- Advertisement -

Latest News

error: Content is protected !!