Wednesday, July 2, 2025
Homeಇತರಬಂಟ್ವಾಳ: ಉಕ್ಕುಡ ಪಬ್ಲಿಕ್ ಶಾಲೆಯನ್ನು ಮುಚ್ಚುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನೋಟೀಸ್ ಜಾರಿ...!

ಬಂಟ್ವಾಳ: ಉಕ್ಕುಡ ಪಬ್ಲಿಕ್ ಶಾಲೆಯನ್ನು ಮುಚ್ಚುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನೋಟೀಸ್ ಜಾರಿ…!

spot_img
- Advertisement -
- Advertisement -

ಬಂಟ್ವಾಳ: ಬಂಟ್ವಾಳ ತಾಲೂಕಿನ ಉಕ್ಕುಡ ಪಬ್ಲಿಕ್ ಶಾಲೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯೂ ಮುಚ್ಚುವಂತೆ ನೋಟೀಸ್ ನೀಡಿದೆ.

ಉಕ್ಕುಡ ಪಬ್ಲಿಕ್ ಶಾಲೆಯು 2020-21 ನೇ ಸಾಲಿನಿಂದ ಶಾಲಾ ಮಾನ್ಯತೆ ನವೀಕರಣಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿರುವುದಿಲ್ಲ. ಅನೇಕ ಬಾರಿ ನೋಟೀಸು ನೀಡಿದ್ದರೂ ಕೂಡ ಶಾಲಾ ಆಡಳಿತ ಮಂಡಳಿಯವರು ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ. ಇದರಿಂದ ಆರ್.ಟಿ.ಇ ಶುಲ್ಕ ಮರುಪಾವತಿಗೂ ತೊಂದರೆಯಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಶಾಲೆಯನ್ನು ಮುಚ್ಚುವಂತೆ ನೋಟೀಸ್ ನೀಡಲಾಗಿದ್ದೂ ಹಾಗೂ ಶಾಲೆ ನೋಂದಣಿ ರದ್ದುಪಡಿಸುವಂತೆ ಉಪನಿರ್ದೇಶಕರಿಗೆ ವರದಿ ಮಾಡಲಾಗಿದೆ. ಪೋಷಕರು ಅವರ ಮಕ್ಕಳ ಟಿ.ಸಿ ಯನ್ನು ಪಡೆದು ಮಾನ್ಯತೆ ಹೊಂದಿರುವ ಶಾಲೆಗಳಲ್ಲಿ ದಾಖಲಿಸಲು ಕ್ರಮ ಕೈಗೊಳ್ಳಬೇಕು ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!