Saturday, May 18, 2024
Homeಕರಾವಳಿಬಂಟ್ವಾಳ: ವಲಸೆ ಕಾರ್ಮಿಕರ ಮನವೊಲಿಸಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದ ತಾಲೂಕು ಆಡಳಿತ

ಬಂಟ್ವಾಳ: ವಲಸೆ ಕಾರ್ಮಿಕರ ಮನವೊಲಿಸಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದ ತಾಲೂಕು ಆಡಳಿತ

spot_img
- Advertisement -
- Advertisement -

ಬಂಟ್ವಾಳ: ಮಾಣಿ ಸಂತೆ ಮೈದಾನದಲ್ಲಿ ಊರಿಗೆ ಹೋಗುತ್ತೇವೆ ಎಂದು ಪಟ್ಟು ಹಿಡಿದ ವಲಸೆ ಕಾರ್ಮಿಕರ ಮನವೊಲಿಸಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಅರ್. ಘಟನಾ ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ಡಿ.ವೈ.ಎಸ್. ಪಿ.ವೆಲಂಟೈನ್ ಡಿಸೋಜ, ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಮತ್ತು ಎಸ್.ಐ ಪ್ರಸನ್ನ ವಿಟ್ಲ ಎಸ್.ಐ.ವಿನೋದ್ ಹಾಗೂ ಸ್ಥಳೀಯ ಪ್ರಮುಖರು ಸೇರಿ ವಲಸೆ ಕಾರ್ಮಿಕರ ಮನವೊಲಿಸುವ ಪ್ರಯತ್ನ ಮಾಡಿದರು.

ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮ ದಲ್ಲಿ ಮರಳುಗಾರಿಕೆ ಮಾಡುತ್ತಿದ್ದ ಸುಮಾರು 200 ಕ್ಕೂ ಅಧಿಕ ವಲಸೆ ಕಾರ್ಮಿಕರನ್ನು ವಾಪಾಸು ಮರಳು ಧಕ್ಕೆಗೆ ಕಳುಹಿಸಿ ಅವರಿಗೆ ತಾತ್ಕಾಲಿಕ ವ್ಯವಸ್ಥೆ ಗೆ ಸೈ ಎಂದು ಒಪ್ಪಿಕೊಂಡಿದ್ದಾರೆ.

ಬರಿಮಾರು ಗ್ರಾಮದಲ್ಲಿ ನಡೆಯುತ್ತಿದ್ದ ಪರವಾನಿಗೆ ಮರಳುಗಾರಿಕೆಯಲ್ಲಿ ಉತ್ತರಪ್ರದೇಶ ಮತ್ತು ಬಿಹಾರ ಮೂಲದ ನೂರಾರು ಕಾರ್ಮಿಕ ರು ಕೆಲಸ ಮಾಡುತ್ತಿದ್ದರು. ಆದರೆ ಲಾಕ್ ಡೌನ್ ಬಳಿಕ ಇವರು ಕೆಲಸವಿಲ್ಲದೆ ಮರಳು ಧಕ್ಕೆಯಲ್ಲಿ ಉಳಿದಿದ್ದರು.

ಆದರೆ ಲಾಕ್ ಡೌನ್ ಸಡಿಲಿಕೆ ಯ ಈ ಸಂಧರ್ಭದಲ್ಲಿ ನಾವು ಊರಿಗೆ ಹೋಗುತ್ತೇವೆ ನಮಗೆ ವ್ಯವಸ್ಥೆ ಮಾಡಿ ಕೊಡಿ ಇಲ್ಲದಿದ್ದರೆ ನಾವು ಕಾಲು ನಡಿಗೆಯಲ್ಲಿ ಯೇ ಊರಿಗೆ ಮರಳುತ್ತೇವೆ ಎಂದ ವಲಸೆ ಕಾರ್ಮಿಕ ರು ಇಂದು ಮಧಾಹ್ನದ ವೇಳೆ ಧಕ್ಕೆಯಿಂದ ಮಾಣಿವರೆಗೆ ನಡೆದುಕೊಂಡು ಬಂದಿದ್ದರು.

- Advertisement -
spot_img

Latest News

error: Content is protected !!