Monday, June 8, 2026
Homeಕರಾವಳಿಮಂಗಳೂರು ಬಂಟ್ವಾಳ ಭೂ ಅಭಿವೃದ್ಧಿ‌ ಬ್ಯಾಂಕ್ ನ ಆಡಳಿತ ಮಂಡಳಿ ಸಹಿತ 13 ಮಂದಿ ನಿರ್ದೇಶಕರು ಸಸ್ಪೆಂಡ್

 ಬಂಟ್ವಾಳ ಭೂ ಅಭಿವೃದ್ಧಿ‌ ಬ್ಯಾಂಕ್ ನ ಆಡಳಿತ ಮಂಡಳಿ ಸಹಿತ 13 ಮಂದಿ ನಿರ್ದೇಶಕರು ಸಸ್ಪೆಂಡ್

- Advertisement -
- Advertisement -

ಬಂಟ್ವಾಳ; ದಿಢೀರ್ ಬೆಳವಣಿಗೆಯೊಂದರಲ್ಲಿ‌ ಭೂ ಅಭಿವೃದ್ಧಿ‌ಬ್ಯಾಂಕ್ ನ ಆಡಳಿತ ಮಂಡಳಿ ಸಹಿತ 13 ಮಂದಿ ನಿರ್ದೇಶಕರನ್ನು ಸಸ್ಪೆಂಡ್ ಮಾಡಿ ಮಂಗಳೂರು ಸಹಕಾರ ಸಂಘಗಳ ನಿಬಂಧಕರು ಆದೇಶ ಹೊರಡಿಸಿದ್ದಾರೆ.

ಬ್ಯಾಂಕ್ ನ ಆಡಳಿತ ಮಂಡಳಿ 6 ಮಂದಿಯನ್ನು ಗುತ್ತಿಗೆಯಾಧಾರದಲ್ಲಿ ನೇಮಕಗೊಳಿಸಿತ್ತು, ಇದನ್ನು ಪ್ರಶ್ನಿಸಿ ನಿರ್ದೇಶಕ ಸುದರ್ಶನ್ ಜೈನ್ ಅವರು ದೂರು ನೀಡಿದ್ದರು. ಇದರ ವಿಚಾರಣೆ ನಡೆಸಿದ ಸಹಕಾರ ಸಂಘಗಳ ನಿಬಂಧಕರು ದೂರುದಾರರಾದ ಸುದರ್ಶನ್ ಜೈನ್, ಅಧ್ಯಕ್ಷ ಅರುಣ್ ರೋಶನ್ ಡಿಸೋಜ ಸಹಿತ 13 ಮಂದಿ ನಿರ್ದೇಶಕರನ್ನು ಮೂರುವರ್ಷದ ವರೆಗೆ ಬ್ಯಾಂಕ್ ನ ಚುನಾವಣೆಗೆ ಸ್ಪರ್ಧಿಸದಂತೆ ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಬಂಟ್ವಾಳ ಭೂಬ್ಯಾಂಕ್ ನಲ್ಲಿ 40 ವರ್ಷ ಬಳಿಕ ಬಿಜೆಪಿ ಬೆಂಬಲಿತರ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿದ್ದು, ಕ್ರೈಸ್ತ ಸಮುದಾಯಕ್ಕೆ ಸೇರಿದ ಬಿ.ಸಿ.ರೋಡಿನ ಖ್ಯಾತ ನ್ಯಾಯವಾದಿ ಅರುಣ್ ರೋಶನ್ ಡಿಸೋಜ ಅವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಬ್ಯಾಂಕನ್ನು ಲಾಭದತ್ತ ಕೊಂಡೊಯ್ದಿದ್ದರು. ಇವರ ಆಡಳಿತಾವಧಿ ಇನ್ನು ಒಂದೂವರೆ ವರ್ಷದವಿದ್ದು, ಈ ಮಧ್ಯೆ 13 ಮಂದಿ ನಿರ್ದೇಶಕರನ್ನು‌ಕೂಡ “ಸೂಪರ್ ಸೀಡ್ ” ಗೊಳಿಸಿ ಆದೇಶಿಸಲಾಗಿದೆ.

- Advertisement -

Latest News

error: Content is protected !!