Monday, June 8, 2026
Homeಕರಾವಳಿಮಂಗಳೂರುಬಂಟ್ವಾಳ: ಬಸ್ ನಲ್ಲಿ ಬ್ಯಾಗ್ ನಲ್ಲಿರಿಸಿದ 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಪ್ರಕರಣ;...

ಬಂಟ್ವಾಳ: ಬಸ್ ನಲ್ಲಿ ಬ್ಯಾಗ್ ನಲ್ಲಿರಿಸಿದ 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಪ್ರಕರಣ; ಅಂತರ್ ರಾಜ್ಯ ಆರೋಪಿಯನ್ನು ಬಂಧಿಸಿ ಚಿನ್ನಾಭರಣ ವಶಪಡಿಸಿಕೊಂಡ ಪೊಲೀಸರು

- Advertisement -
- Advertisement -

ಬಂಟ್ವಾಳ: ಬಸ್ ನಲ್ಲಿ ಬ್ಯಾಗ್ ನಲ್ಲಿರಿಸಿದ 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ  ಬಂಟ್ವಾಳ ನಗರ ಠಾಣೆ ಪೊಲೀಸರು ಅಂತರ್ ರಾಜ್ಯ ಆರೋಪಿಯನ್ನು ಬಂಧಿಸಿ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಮಧ್ಯಪ್ರದೇಶ ರಾಜ್ಯದ ಧಾರಾ ಜಿಲ್ಲೆಯ ಸಮದ್ ಖಾನ್ (37) ಬಂಧಿತ ಆರೋಪಿ.

ದಿನಾಂಕ 19.11.2025 ರಂದು ಬಂಟ್ವಾಳ ನಗರ ಠಾಣಾ ವ್ಯಾಪ್ತಿಯಲ್ಲಿ, ಬಸ್ ನಲ್ಲಿ ಬ್ಯಾಗ್ ಒಳಗಡೆ ಇರಿಸಿದ್ದ  ಸುಮಾರು 170 ರಿಂದ 180 ಗ್ರಾಂ  ಚಿನ್ನಾಭರಣ  ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅ. ಕ್ರ :132/2025 , ಕಲಂ :303(2)  BNS ರಂತೆ ಪ್ರಕರಣ ದಾಖಲಾಗಿತ್ತು. ಅದರಂತೆ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದ್ದು ಆರೋಪಿಯಿಂದ ಕಳ್ಳತನ ಮಾಡಿದ 174 ಗ್ರಾಂ ಗಳಷ್ಟು ಅಂದಾಜು 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಲಾಗಿದೆ.

ಆರೋಪಿ ಪತ್ತೆ ಕಾರ್ಯದಲ್ಲಿ ಬಂಟ್ವಾಳ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಯಶ್ ಕುಮಾರ್ ಶರ್ಮಾ, ಐಪಿಎಸ್, ರವರ ನಿರ್ದೇಶನದಂತೆ, ಪ್ರಕರಣದ ತನಿಖಾಧಿಕಾರಿಯಾದ ಅನಂತ ಪದ್ಮನಾಭ ಕೆ.ವಿ,ಪೊಲೀಸ್ ನಿರೀಕ್ಷಕರು, ಬಂಟ್ವಾಳ ನಗರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ, ,ಬಂಟ್ವಾಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸಂದೀಪ್ ಕುಮಾರ್ ಶೆಟ್ಟಿ ಹಾಗೂ ಬಂಟ್ವಾಳ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಹೆಚ್.ಸಿ 719 ವಿಜಯ್ ಕುಮಾರ್, ಹೆಚ್.ಸಿ 1023 ರಾಜೇಶ್,ಹೆಚ್.ಸಿ 1037 ಇರ್ಷಾದ್, ಪಿ.ಸಿ 2294 ಬಸವರಾಜ , ಹೆಚ್.ಸಿ 310 ಸುರೇಶ್ ಕುಮಾರ್, ಸಿ ಪಿ.ಸಿ 2471 ವಿಜಯ್ ಕುಮಾರ್, ಮಪಿಸಿ 2436 ರೇವತಿ ಹಾಗೂ ಜಿಲ್ಲಾ ಪೊಲೀಸ್ ಘಟಕದ ಗಣಕ ಯಂತ್ರ ವಿಭಾಗದ ಸಿಬ್ಬಂದಿಗಳಾದ ಸಂಪತ್ ಕುಮಾರ್ ಹಾಗೂ ದಿವಾಕರ ರವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.

- Advertisement -

Latest News

error: Content is protected !!