Saturday, May 18, 2024
Homeಕರಾವಳಿಕೊರೋನಾ ಮುಕ್ತವಾದ ಬಂಟ್ವಾಳ: 5 ಸೋಂಕಿತರು ಆಸ್ಪತ್ರೆಯಿಂದ ಡಿಸ್ಚಾರ್ಜ್

ಕೊರೋನಾ ಮುಕ್ತವಾದ ಬಂಟ್ವಾಳ: 5 ಸೋಂಕಿತರು ಆಸ್ಪತ್ರೆಯಿಂದ ಡಿಸ್ಚಾರ್ಜ್

spot_img
- Advertisement -
- Advertisement -

ಮಂಗಳೂರು: ಕೋವಿಡ್-19 ಚಿಕಿತ್ಸಾ ಆಸ್ಪತ್ರೆಯಾಗಿರುವ ವೆನ್ಲಾಕ್ ‌ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಐವರು ಕೊರೋನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಬಂಟ್ವಾಳದ ಮೂವರು ಮತ್ತು ಮಂಗಳೂರೂ ಬೊಳೂರಿನ ಇಬ್ಬರು ಸೋಂಕಿತ ಗುಣಮುಖರಾಗಿದ್ದು ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಸೋಂಕುಮುಕ್ತರಾಗಿರುವ ಐವರನ್ನು ಇಂದು ಪೂರ್ವಾಹ್ನ 11 ಗಂಟೆ ಸುಮಾರಿಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು. ಈ ಪೈಕಿ ಒಬ್ಬರು ದೃಷ್ಟಿ ಕಳೆದುಕೊಂಡಿರುವ ಹಿರಿಯ ನಾಗರಿಕರೂ ಸೇರಿದ್ದಾರೆ.

ಇಂದು ಮೂವರು ಬಂಟ್ವಾಳದ ಸೋಂಕಿತರು ಬಿಡುಗಡೆಯಾಗಿದ್ದಾರೆ. ಈ ಮೂಲಕ ಜಿಲ್ಲೆಯ ಅತೀ ದೊಡ್ಡ ಕೋವಿಡ್-19 ಹಾಟ್ ಸ್ಪಾಟ್ ಆಗಿದ್ದ ಬಂಟ್ವಾಳ ಈಗ ಸೋಂಕು ಮುಕ್ತವಾಗಿದೆ. ಇವರನ್ನು ವೆನ್ಲಾಕ್‌ನ ಆಯುಷ್ ಬ್ಲಾಕ್ ಮುಂಭಾಗದಲ್ಲಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಬೀಳ್ಕೊಟ್ಟರು.

ಸದ್ಯ ಮಂಗಳೂರು ಕೋವಿಡ್ ಆಸ್ಪತ್ರೆ ಯಲ್ಲಿ 31 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂರು ಮಂದಿ ರೋಗಿಗಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲಾ ಕೋವಿಡ್-19 ಸೋಂಕಿತ ರೋಗಿಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೆನ್ಲಾಕ್ ಆಸ್ಪತ್ರೆ ಯ ಅಧೀಕ್ಷಕ ಡಾ.ಸದಾಶಿವ ಶಾನುಭೋಗ ಮಾಹಿತಿ ನೀಡಿದ್ದಾರೆ.

- Advertisement -
spot_img

Latest News

error: Content is protected !!