Friday, June 28, 2024
Homeಅಪರಾಧಅದ್ಧೂರಿಯಾಗಿ ಮದುವೆಯಾಗಲು ಬ್ಯಾಂಕ್ ಗೆ ಕನ್ನ ಹಾಕಿದ ಖದೀಮ

ಅದ್ಧೂರಿಯಾಗಿ ಮದುವೆಯಾಗಲು ಬ್ಯಾಂಕ್ ಗೆ ಕನ್ನ ಹಾಕಿದ ಖದೀಮ

spot_img
- Advertisement -
- Advertisement -

ಬೆಳಗಾವಿ: ಅದ್ಧೂರಿಯಾಗಿ ಮದುವೆಯಾಗಬೇಕು ಅಂತಾ ಯುವಕನೊಬ್ಬ ಸ್ನೇಹಿತರೊಂದಿಗೆ ಸೇರಿಕೊಂಡು ಬ್ಯಾಂಕ್ ಗೆ ಕನ್ನ ಹಾಕಿ ಸಿಕ್ಕಿ ಬಿದ್ದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದ ಬಸವರಾಜ ಹುಣಶಿಕಟ್ಟಿ(30), ಸಂತೋಷ್ ಕಂಬಾರ(31), ಗಿರೀಶ್ ಬೆಳವಲ(26) ಬಂಧಿತರು. ಬಂಧಿತರಿಂದ ಪೊಲೀಸರು 4.37 ಕೋಟಿ ನಗದು, 1.63 ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ಆರೋಪಿಗಳಲ್ಲಿ ಒಬ್ಬನಾದ ಬಸವರಾಜ್ ಎಂಬಾತ ಮುರಗೋಡ ಡಿಸಿಸಿ ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಿದ್ದ. ಅದ್ಧೂರಿಯಾಗಿ ಮದುವೆಯಾಗಬೇಕು ಅಂದುಕೊಂಡಿದ್ದ ಆತ, ಅದಕ್ಕಾಗಿ ಬ್ಯಾಂಕ್ ಗೆ ಕನ್ನ ಹಾಕಲು ಪ್ಲ್ಯಾನ್ ಮಾಡಿದ್ದಾನೆ. ಅದಕ್ಕೆ ಸ್ನೇಹಿತರ ಸಹಾಯ ಪಡೆದ ಆತ ನಕಲಿ ಕೀ ಬಳಸಿ ಕಳ್ಳತನ ಮಾಡಿದ್ದಾನೆ.  ನಂತರ ಕದ್ದ ಹಣ ಹಾಗೂ ಚಿನ್ನಾಭರಣವನ್ನು ಕಬ್ಬಿನ ಗದ್ದೆಯಲ್ಲಿ ಹೂತಿಟ್ಟಿದ್ದ.

ಬಳಿಕ ಮಾರನೇ ದಿನ ಬ್ಯಾಂಕ್ ಬಳಿ ಬಂದು ಗೊತ್ತಿಲ್ಲದಂತೆ ವರ್ತಿಸಿದ್ದ. ಪ್ರಕರಣದ ಬೆನ್ನು ಹತ್ತಿದ ಪೊಲೀಸರಿಗೆ ತನಿಖೆ ನಡೆಸಿದ ಬಳಿಕ ಅಸಲಿಯತ್ತು ಗೊತ್ತಾಗಿದ್ದು. ಆರೋಪಿಗಳನ್ನು ಬಂಧಿಸಿದ್ದಾರೆ.

- Advertisement -
spot_img

Latest News

error: Content is protected !!