Thursday, June 4, 2026
Homeಕರಾವಳಿಮಂಗಳೂರುಧರ್ಮಸ್ಥಳಕ್ಕೆ ನೂತನ ಘಂಟೆಯನ್ನು ಅರ್ಪಿಸಿದ ಬೆಂಗಳೂರಿನ ಉದ್ಯಮಿ ದಿನೇಶ್

ಧರ್ಮಸ್ಥಳಕ್ಕೆ ನೂತನ ಘಂಟೆಯನ್ನು ಅರ್ಪಿಸಿದ ಬೆಂಗಳೂರಿನ ಉದ್ಯಮಿ ದಿನೇಶ್

- Advertisement -
- Advertisement -

ಧರ್ಮಸ್ಥಳ; ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬೆಂಗಳೂರಿನ ಉದ್ಯಮಿ ದಿನೇಶ್ ನೂತನ ಘಂಟೆಯನ್ನು ಅರ್ಪಿಸಿದ್ದಾರೆ. ಧರ್ಮಾಧಿಕಾರಿ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ನೂತನ ಘಂಟೆಯನ್ನು ಉದ್ಘಾಟಿಸಿ ದಾನಿಗಳನ್ನು ಸನ್ಮಾನಿಸಿದರು.

ಬೆಂಗಳೂರಿನ ಉದ್ಯಮಿಯಾದ ಕೆ.ಎಸ್. ದಿನೇಶ್ ಮತ್ತು ಪತ್ನಿ ಪಿ. ಸುನೀತಾ ಧರ್ಮಸ್ಥಳದ ಭಕ್ತರಾಗಿದ್ದು, ದೇವಸ್ಥಾನಕ್ಕೆ ಕಾಣಿಕೆಯಾಗಿ ಅರ್ಪಿಸಿದ ಬೃಹತ್ ಘಂಟೆಯನ್ನು ಬುಧವಾರ ಶಿವರಾತ್ರಿಯ ಶುಭಾವಸರದಲ್ಲಿ ಧರ್ಮಸ್ಥಳದಲ್ಲಿ ಅಣ್ಣಪ್ಪಸ್ವಾಮಿ ಬೆಟ್ಟದ ಎದುರು ನಿರ್ಮಿಸಿದ ನೂತನ ಮಂಟಪದಲ್ಲಿ  ಧರ್ಮಾಧಿಕಾರಿಗಳಾದ ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದರು. ಪೂಜ್ಯ ಶ್ರೀ ಹೆಗ್ಗಡೆಯವರು ದಾನಿಗಳನ್ನು ಗೌರವಿಸಿದರು.

- Advertisement -

Latest News

error: Content is protected !!