Wednesday, May 8, 2024
Homeತಾಜಾ ಸುದ್ದಿಮುಂದಿನ ವರ್ಷದಿಂದ ದೆಹಲಿ-ಎನ್‌ಸಿಆರ್ ಭಾಗದಲ್ಲಿ ಕಲ್ಲಿದ್ದಲು ಬಳಕೆ ನಿಷೇಧ; ಮಾಲಿನ್ಯ ತಡೆಗೆ ಕ್ರಮ

ಮುಂದಿನ ವರ್ಷದಿಂದ ದೆಹಲಿ-ಎನ್‌ಸಿಆರ್ ಭಾಗದಲ್ಲಿ ಕಲ್ಲಿದ್ದಲು ಬಳಕೆ ನಿಷೇಧ; ಮಾಲಿನ್ಯ ತಡೆಗೆ ಕ್ರಮ

spot_img
- Advertisement -
- Advertisement -

ನವದೆಹಲಿ: ದೇಶದ ನಾನಾ ಭಾಗದಲ್ಲಿ ವಾಯುಮಾಲಿನ್ಯ ಬಿಗಡಾಯಿಸಿದೆ. ಅದರಲ್ಲೂ ದೆಹಲಿಯಲ್ಲಿ ಉಸಿರಾಡುವುದೇ ಕಷ್ಟಕರವಾಗಿದೆ. ಈ ನಡುವೆ ಮುಂದಿನ ವರ್ಷದಿಂದ ದೆಹಲಿ-ಎನ್‌ಸಿಆರ್ ಭಾಗದಲ್ಲಿ ಕಲ್ಲಿದ್ದಲು ಬಳಕೆ ನಿಷೇಧಿಸಿ ವಾಯು ಗುಣಮಟ್ಟ ನಿರ್ವಹಣಾ ಆಯೋಗ ಆದೇಶ ಹೊರಡಿಸಿದೆ.


ಕೈಗಾರಿಕೆಗಳು ಸೇರಿ ಯಾವುದೇ ಸಂಸ್ಥೆಯೂ ಉತ್ಪಾದನಾ ಕಾರ್ಯಗಳಿಗಾಗಿ ಕಲ್ಲಿದ್ದಲು ಗೆ ಬಳಸುವಂತಿಲ್ಲ ಎಂದಿದೆ. ಉಷ್ಣ ವಿದ್ಯುತ್ ಸ್ಥಾವರದಲ್ಲಿ ಮಾತ್ರ ಕಡಿಮೆ ಪ್ರಮಾಣದ ಸಲ್ಪರ್‌ಯುಕ್ತ ಕಲ್ಲಿದ್ದಲು ಬಳಕೆಗೆ ವಿನಾಯಿತಿ ನೀಡಲಾಗಿದೆ.


ಎನ್‌ಸಿಆರ್‌ನಲ್ಲಿ ಕೈಗಾರಿಕಾ ಅನ್ವಯಿಕೆಗಳಲ್ಲಿ ವಾರ್ಷಿಕವಾಗಿ ಸುಮಾರು 1.7 ಮಿಲಿಯನ್ ಟನ್ ಕಲ್ಲಿದ್ದಲನ್ನು ಬಳಸಲಾಗುತ್ತದೆ, ಆರು ಪ್ರಮುಖ ಕೈಗಾರಿಕಾ ಜಿಲ್ಲೆಗಳಲ್ಲಿಯೇ ಸುಮಾರು 1.4 ಮಿಲಿಯನ್ ಟನ್‌ಗಳನ್ನು ಬಳಸಲಾಗುತ್ತಿದೆ. ಇದು ಪ್ರಮುಖವಾಗಿ ವಾಯುಮಾಲಿನ್ಯಕ್ಕೆ ಕಾರಣವಾಗುವ ಅಂಶದಲ್ಲಿ ಮುಖ್ಯವೆನಿಸಿದ್ದು, ಈ ಕ್ರಮಕ್ಕೆ ಮುಂದಾಗಲಾಗಿದೆ.

- Advertisement -
spot_img

Latest News

error: Content is protected !!