Sunday, May 5, 2024
Homeತಾಜಾ ಸುದ್ದಿಬೆಳ್ತಂಗಡಿ: ಕಾನ್ಸರ್ ನಿಂದ ಬಳಲುತ್ತಿರುವ ಯುವತಿಗೆ 1.5 ಲಕ್ಷ ರೂ. ಸಹಾಯ ಮಾಡಿದ ವಾಟ್ಸಾಪ್ ತಂಡ

ಬೆಳ್ತಂಗಡಿ: ಕಾನ್ಸರ್ ನಿಂದ ಬಳಲುತ್ತಿರುವ ಯುವತಿಗೆ 1.5 ಲಕ್ಷ ರೂ. ಸಹಾಯ ಮಾಡಿದ ವಾಟ್ಸಾಪ್ ತಂಡ

spot_img
- Advertisement -
- Advertisement -

ಬೆಳ್ತಂಗಡಿ: ಉರುವಾಲು ಗ್ರಾಮದ ಕಾಯರಡ್ಕ ಜನತಾ ಕಾಲೊನಿಯ ಶ್ರೀಮತಿ ರೇವತಿ ಹಾಗೂ ಜನಾರ್ದನ ಪೂಜಾರಿಯವರ ಮಗಳಾದ 20 ವರುಷದ “ಕುಮಾರಿ ಶ್ರಾವ್ಯ” ಇವರು ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ಧನಸಹಾಯ ಯಾಚಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸಂದೇಶವನ್ನು “ಬಲಿಷ್ಠ ಬಿಲ್ಲವೆರ್ “ಎಂಬ ವಾಟ್ಸಾಪ್ ಗ್ರೂಪ್ ನ ಪ್ರಮುಖರಾದ ಸನತ್-ಸಂಪತ್ ಅಂಚನ್ ಕುಕ್ಕೆಡಿ ಇವರುಗಳು ಪರಿಶೀಲಿಸಿ ನಂತರ ತಮ್ಮ ವಾಟ್ಸಾಪ್ ತಂಡದಲ್ಲಿ ದಾನಿಗಳ ಸಹಕಾರದಿಂದ ಸುಮಾರು 1ಲಕ್ಷದ 50ಸಾವಿರ ರೂಪಾಯಿ ಹಣವನ್ನು ಒಟ್ಟುಗೂಡಿಸಿ ಬಲಿಷ್ಠ ಬಿಲ್ಲವೆರ್ ತಂಡದ 21ನೇ ಸೇವಾ ಯೋಜನೆಯಾಗಿ ಶುಕ್ರವಾರ ಬೆಳ್ತಂಗಡಿ ತಾಲೂಕಿನ ಮಾಜಿ ಶಾಸಕರಾದ ವಸಂತ ಬಂಗೇರರವರ ಮೂಲಕ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಸಂತ ಬಂಗೇರವರು ಕೊರೊನ ಎರಡನೇ ಅಲೆಯ ಲಾಕ್ಡೌನ್ ನಡುವೆಯು ದಾನಿಗಳ ಅಭೂತಪೂರ್ವ ನೆರವಿಗೆ ಹಾಗೂ ಈ ಮಟ್ಟಿನ ಸೇವೆ ನೀಡುವಲ್ಲಿ ಪ್ರಮುಖರಾದ ಬಲಿಷ್ಠ ಬಿಲ್ಲವೆರ್ ತಂಡದ ಸನತ್ ಅಂಚನ್ ಹಾಗೂ ಸಂಪತ್ ಅಂಚನ್ ರವರ ಕಾರ್ಯದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ “ಬಲಿಷ್ಠ ಬಿಲ್ಲವೆರ್ “ತಂಡದ ಸದಸ್ಯರುಗಳಾದ ಸಂತೋಷ್ ಅಂಚನ್, ಹೇಮಂತ್ ಕೋಟ್ಯಾನ್ ವಾಮದಪದವು, ರಾಜೇಶ್ ಪೂಜಾರಿ ಮದ್ದಡ್ಕ, ಸಂದೀಪ್ ಸುವರ್ಣ ಕುಕ್ಕೇಡಿ, ತೀಲಕ್ ಕೋಟ್ಯಾನ್ ವಾಮದಪದವು ಹಾಗೂ ಪ್ರಜ್ನಾ ಪೂಜಾರಿ ಜೊತೆಗಿದ್ದರು.

- Advertisement -
spot_img

Latest News

error: Content is protected !!