Wednesday, June 3, 2026
Homeಕರಾವಳಿಉಡುಪಿಉಡುಪಿಯಲ್ಲಿ ಅಪಾರ್ಟ್ ಮೆಂಟ್ ನ ಏಳನೇ ಮಹಡಿಯಿಂದ ಜಿಗಿದು ವೃದ್ಧೆ ಆತ್ಮಹತ್ಯೆ

ಉಡುಪಿಯಲ್ಲಿ ಅಪಾರ್ಟ್ ಮೆಂಟ್ ನ ಏಳನೇ ಮಹಡಿಯಿಂದ ಜಿಗಿದು ವೃದ್ಧೆ ಆತ್ಮಹತ್ಯೆ

- Advertisement -
- Advertisement -

ಉಡುಪಿ: ವೃದ್ಧೆಯೊರ್ವರು ಅಪಾರ್ಟ್ ಮೆಂಟ್ ನ  ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಚಿತ್ರದುರ್ಗ ಮೂಲದ  ಗಂಗಮ್ಮ (70) ಮೃತ ದುರ್ದೈವಿ.

ನಗರದ ಬಿಗ್ ಬಝಾರ್ ಸನಿಹದಲ್ಲಿರುವ ವಸತಿ ಸಂಕೀರ್ಣದಲ್ಲಿಯ ಮಗನ ಮನೆಯಲ್ಲಿ ಕೆಲವು ತಿಂಗಳುಗಳಿಂದ ವಾಸವಾಗಿದ್ದರು. ಕೆಲವು ದಿನಗಳ ಹಿಂದೆ ಕೋವಿಡ್ ಸೋಂಕಿಗೆ ಬಾಧಿತರಾಗಿ ಗುಣಮುಖರಾಗಿದ್ದರು. ಇವರ ಪತಿಯು ಕೊರೋನ ಪಾಸಿಟಿವ್ ಇರುವುದರಿಂದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಪತಿಯ ಅನಾರೋಗ್ಯದ ಕಾರಣ ಮನನೊಂದ ಗಂಗಮ್ಮ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.

ಘಟನಾ ಸ್ಥಳಕ್ಕೆ ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ ಅಮಾಸೆಬೈಲು, ಸಿಬ್ಬಂದಿ ಅರುಣ್ ಯು. ಆಗಮಿಸಿ ಕಾನೂನು ಪ್ರಕ್ರಿಯೆ ನಡೆಸಿದರು.ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!