Friday, June 5, 2026
Homeಕರಾವಳಿತೆಂಕುತಿಟ್ಟು ಯಕ್ಷರಂಗದ ಭೀಷ್ಮ ಬಲಿಪ ನಾರಾಯಣ ಭಾಗವತ ವಿಧಿವಶ

ತೆಂಕುತಿಟ್ಟು ಯಕ್ಷರಂಗದ ಭೀಷ್ಮ ಬಲಿಪ ನಾರಾಯಣ ಭಾಗವತ ವಿಧಿವಶ

- Advertisement -
- Advertisement -

ಮಂಗಳೂರು; ತೆಂಕುತಿಟ್ಟು ಯಕ್ಷರಂಗದ ಭೀಷ್ಮ ಬಲಿಪ ನಾರಾಯಣ ಭಾಗವತ ವಿಧಿವಶರಾಗಿದ್ದಾರೆ. ಇಂದು ಸಂಜೆ 6:30 ಗಂಟೆಗೆ ದೈವಾಧೀನರಾಗಿದ್ದಾರೆ.

ಅವರ ಅಂತಿಮ ವಿಧಿ ವಿಧಾನಗಳು ಇಂದು ರಾತ್ರಿ 1.30 ಗಂಟೆಯ ಸುಮಾರಿಗೆ ಅವರ ಸ್ವಗ್ರಹದಲ್ಲಿ ನಡೆಯಲಿದೆ. ಇನ್ನು ನಾರಾಯಣ ಭಾಗವತ ನಿಧನಕ್ಕೆ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಕಂಬನಿ ಮಿಡಿದಿದ್ದಾರೆ.

 ಯಕ್ಷಗಾನ ಕ್ಷೇತ್ರದಲ್ಲಿ ಸಾಂಪ್ರದಾಯಿಕ ಭಾಗವತಿಕೆಯ ಮೇರು ವ್ಯಕ್ತಿತ್ವದ ಭಾಗವತರೂ ಆಗಿರುವ,ಯಕ್ಷ ಭೀಷ್ಮ  ಬಲಿಪ ನಾರಾಯಣ ಭಾಗವತರು ದೇವರ ಪಾದ ಸೇರಿದ ವಿಷಯವು ಯಕ್ಷಗಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ಅವರ ಕುಟುಂಬಕ್ಕೆ ದು:ಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಕಟೀಲು ತಾಯಿ ಭ್ರಮರಾಂಭೆ ಹಾಗೂ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕರುಣಿಸಲೆಂದು ಪ್ರಾರ್ಥಿಸುತ್ತೇವೆ ಎಂದಿದ್ದಾರೆ.

- Advertisement -

Latest News

error: Content is protected !!