Wednesday, June 26, 2024
Homeಕರಾವಳಿಉಡುಪಿಉಡುಪಿ: ಕಾರಿನ ಗ್ಲಾಸ್ ಒಡೆದು 80 ಸಾವಿರ ರೂ ಮೌಲ್ಯದ ಸೊತ್ತುಗಳನ್ನು ಹೊಂದಿದ್ದ ಬ್ಯಾಗ್‌ ಕಳವು...

ಉಡುಪಿ: ಕಾರಿನ ಗ್ಲಾಸ್ ಒಡೆದು 80 ಸಾವಿರ ರೂ ಮೌಲ್ಯದ ಸೊತ್ತುಗಳನ್ನು ಹೊಂದಿದ್ದ ಬ್ಯಾಗ್‌ ಕಳವು !

spot_img
- Advertisement -
- Advertisement -

ಉಡುಪಿ: 80 ಸಾವಿರ ರೂ ಮೌಲ್ಯದ ಸೊತ್ತುಗಳನ್ನು ಹೊಂದಿದ್ದ ಬ್ಯಾಗ್‌ವೊಂದನ್ನು ನಿಲ್ಲಿಸಿದ್ದ ಕಾರಿನ ಗ್ಲಾಸ್ ಒಡೆದು ಕಳ್ಳತನ ಮಾಡಿರುವ ಘಟನೆ ಉಡುಪಿಯ ಕೃಷ್ಣಮಠದ ಹಿಂಬದಿಯ ಪಾರ್ಕಿಂಗ್ ಪ್ರದೇಶದಲ್ಲಿ ನಡೆದಿದೆ.

ಗೋಕುಲಕೃಷ್ಣ ಎಸ್ ಅವರು ಕುಟುಂಬ ಸಮೇತರಾಗಿ ಉಡುಪಿಯ ಕೃಷ್ಣಮಠಕ್ಕೆ ಬಂದಿದ್ದು , ತಮ್ಮ ಕಾರನ್ನು ಕೃಷ್ಣಮಠದ ಹಿಂಬದಿಯ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿ ದೇವರ ದರ್ಶನಕ್ಕೆ ಹೋಗಿದ್ದರು . ಬಳಿಕ ವಾಪಾಸು ಬಂದು ನೋಡುವಾಗ ಕಳ್ಳರು ಇವರ ಕಾರಿನ ಡ್ರೈವರ್ ಸೈಡ್ ನ ಗ್ಲಾಸನ್ನು ಒಡೆದು ಅದರಲ್ಲಿದ್ದ ಬ್ಯಾಗ್ ನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ .ಈ ಬಗ್ಗೆ ತಮಿಳುನಾಡು ಮೂಲದ ಗೋಕುಲಕೃಷ್ಣ ಎಸ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.

ಕಳವಾದ ಬ್ಯಾಗ್ ನಲ್ಲಿ ಬೆಲೆ ಬಾಳುವ ಕ್ಯಾಮೆರಾ , ಬಟ್ಟೆ ಬರೆಗಳ ಸಹಿತ 80,000 ರೂ ಮೌಲ್ಯದ ಇತರ ಸೊತ್ತು ಇತ್ತು ಎಂಬುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ . ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

- Advertisement -
spot_img

Latest News

error: Content is protected !!