Thursday, April 18, 2024
Homeಕರಾವಳಿಉಜಿರೆ: ಬದುಕು ಕಟ್ಟೋಣ ಬನ್ನಿ ತಂಡದಿಂದ 176 ಬಡಕುಟುಂಬಗಳಿಗೆ ಕಿಟ್ ವಿತರಣೆ

ಉಜಿರೆ: ಬದುಕು ಕಟ್ಟೋಣ ಬನ್ನಿ ತಂಡದಿಂದ 176 ಬಡಕುಟುಂಬಗಳಿಗೆ ಕಿಟ್ ವಿತರಣೆ

spot_img
- Advertisement -
- Advertisement -

ಉಜಿರೆ: ಬೆಳ್ತಂಗಡಿ ತಾಲೂಕಿನ ಹೆಸರಾಂತ ಮತ್ತು ಸಾಮಾಜಿಕ ಕಳಕಳಿ ಇರುವ “ಬದುಕು ಕಟ್ಟೋಣ ಬನ್ನಿ ” ತಂಡದಿಂದ ಉಜಿರೆ ಪರಿಸರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಯ್ದ ಬಡಕುಟುಂಬಕ್ಕೆ ಒಟ್ಟು 176 ಕುಟುಂಬಕ್ಕೆ ಕಿಟ್ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ. ಉಜಿರೆ ಗ್ರಾಮದ ಪೆರ್ಲದ -21 ಕುಟುಂಬಕ್ಕೆ, ಮುಂಡತ್ತೋಡಿಯ-24 ಕುಟುಂಬಕ್ಕೆ, ಬಡಕೊಟ್ಟು- 11 ಕುಟುಂಬಕ್ಕೆ, ಪಾಣಿಯಾಲು-14 ಕುಟುಂಬಕ್ಕೆ ನೀಡಲಾಯಿತು.

ಇಂದು ಒಟ್ಟು 67 ಕುಟುಂಬಕ್ಕೆ ಕಿಟ್ ಗಳನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನೇತ್ರತ್ವದಲ್ಲಿ ವಿತರಿಸಲಾಯಿತು. ಉಳಿದ ಕುಟುಂಬಕ್ಕೆ ನಾಳೆ ನೀಡಲಾಗುತ್ತಿದೆ.
ಈ ಸಂದರ್ಭದಲ್ಲಿ ಉಜಿರೆ ಲಕ್ಷ್ಮೀ ಗ್ರೂಪ್ಸ್ ಮಾಲಕ – ಮೋಹನ್ ಕುಮಾರ್, ಉಜಿರೆ ಸಂಧ್ಯಾ ಟ್ರೇಡರ್ಸ್ ಮಾಲಕ ರಾಜೇಶ್ ಪೈ, ರೋಟೆರಿಯಾನ್ ಶ್ರೀಧರ್ ಸುರಕ್ಷಾ ಉಜಿರೆ, ರಾಘವೇಂದ್ರ ಬೈಪಾಡಿತ್ತಾಯ, ಪ್ರಕಾಶ್ ಆಪ್ರಮೇಯ, ದೇವಪ್ಪ ಗೌಡ ಸಾಯಿಕೃಪಾ, ಅರವಿಂದ್ ಕಾರಂತ್, ಶ್ರೀಧರ್ ಮರಕ್ಕಡ, ಉಮೇಶ್ ಶೆಟ್ಟಿ ,ಡಾ.ದಯಾಕರ್ , ಮೋಹನ್ ಚೌಧರಿ, ಪ್ರಭಾಕರ ಹೆಗ್ಡೆ, ಗಣೇಶ್ ಇಂಜಿನಿಯರ್, ರಾಜೇಶ್ ಶೆಟ್ಟಿ ನವಶಕ್ತಿ, ಭರತ್ ಕುಮಾರ್, ಲಕ್ಷ್ಮಣ್ ಸಫಲ್ಯ, ಸಿಂಧೂ ಜನಾರ್ಧನ, ರವಿ ಚಕ್ಕಿತ್ತಾಯ, ಜಯಪ್ರಕಾಶ್ ಶೆಟ್ಟಿ,ತಾ.ಪ.ಸ ಶಶಿಧರ್ ಕಲ್ಮಂಜ,ತಿಮ್ಮಯ್ಯ ನಾಯ್ಕ್, ದಿನೇಶ್ ನಾಯ್ಕ, ಮಾಧವ ಕಾಮತ್, ಪ್ರತೀಕ್ ಕೋಟ್ಯಾನ್ ,ರಾಘವೇಂದ್ರ , ಶ್ರೀಧರ್,ಯೋಗೀಶ್ ಕುಲಪ್ಪಳ ,ಚರನ್ ,ಧನುಷ್ ಎಚ್ ಮತ್ತು ಬದುಕು ಕಟ್ಟೋಣ ಬನ್ನಿ ತಂಡದ ಸದಸ್ಯರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!