ರಾಜ್ಯದಲ್ಲಿ ಆಯಾಯ ಜಿಲ್ಲೆಗಳಿಗೆ ಹೋಗಲು ಬಸ್ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಮಾಡಿದೆ. ಇತ್ತ ಕೇಂದ್ರ ಸರ್ಕಾರ ಅಂತರ್ ರಾಜ್ಯಗಳಿಗೆ ಹೋಗುವುದಕ್ಕೂ ಅನುಮತಿಯನ್ನು ನೀಡಿದೆ. ಆದರೆ ಮಹಾರಾಷ್ಟ್ರದಲ್ಲಿರುವ ರಾಜ್ಯದ ವಲಸೆ ಕಾರ್ಮಿಕರಿಗೆ ಮಾತ್ರ ಇದರ ಉಪಯೋಗ ಇರುವುದಿಲ್ಲ.
ಹೌದು, ಮಹಾರಾಷ್ಟ್ರದಲ್ಲಿ ಕೊರೊನಾ ಹೆಚ್ಚಾಗಿ ಇರುವುದರಿಂದ ಅಲ್ಲಿನ ಕಾರ್ಮಿಕರು ಕರ್ನಾಟಕಕ್ಕೆ ಬರಲು ರೈಲು ಸೇವೆ ನೀಡಲಾಗದು ಎಂದು ರೈಲ್ವೇ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದ್ದಾರೆ.
ಇನ್ನು ಕೇಂದ್ರದ ಸೂಚನೆಯಂತೆ ಬೇರೆ ಬೇರೆ ರಾಜ್ಯಗಳಿಗೆ ಹೋಗಲು ರೈಲು ವ್ಯವಸ್ಥೆ ಮಾಡಲು ತಿಳಿಸಿತ್ತು. ಅದರಂತೆ ಮಾಡಲಾಗುತ್ತಿದೆ. ಅದಕ್ಕಾಗಿ ನೋಡೆಲ್ ಅಧಿಕಾರಿಯನ್ನು ನೇಮಿಸಲಾಗಿದೆ ಎಂದಿದ್ದಾರೆ.
ಇನ್ನು ಆರೋಗ್ಯ ತಪಾಸಣೆಯ ಜವಾಬ್ದಾರಿಯನ್ನು ಆಯಾಯ ರಾಜ್ಯ ಸರ್ಕಾರಗಳೇ ಹೊರಬೇಕು ಹಾಗೂ ಪ್ರಯಾಣ ದರವನ್ನು ರಾಜ್ಯ ಸರ್ಕಾರಗಳೇ ನೀಡಬೇಕು ಎಂದು ಹೇಳಿದ್ದಾರೆ. ಈಗಾಗಲೇ ಅನೇಕ ಮಂದಿ ಆನ್ ಲೈನ್ ನಲ್ಲಿ ರಿಜಿಸ್ಟರ್ ಮಾಡಿದ್ದಾರೆ. ಇವರಿಗೆಲ್ಲ ರೈಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.