Wednesday, September 18, 2024
Homeಉದ್ಯಮಮದ್ಯಪ್ರಿಯರಿಗೆ ಮತ್ತೊಂದು ಬಿಗ್ ಶಾಕ್ : ನಾಳೆ ಎಣ್ಣೆ ಸಿಗೋದು ಡೌಟ್ !

ಮದ್ಯಪ್ರಿಯರಿಗೆ ಮತ್ತೊಂದು ಬಿಗ್ ಶಾಕ್ : ನಾಳೆ ಎಣ್ಣೆ ಸಿಗೋದು ಡೌಟ್ !

spot_img
- Advertisement -
- Advertisement -

ಬೆಂಗಳೂರು : ನಾಳೆ ಲಾಕ್ ಡೌನ್ 3.0 ಆರಂಭ ಆಗಲಿದೆ. ಇದೇ ಸಂದರ್ಭದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಮದ್ಯ ಮಾರಾಟ ಕೂಡ ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಆರಂಭ ಆಗಲಿದೆ. ಈ ಖುಷಿಯಲ್ಲಿದ್ದಂತ ಎಣ್ಣೆ ಪ್ರಿಯರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಹೊರಬಿದ್ದಿದ್ದು, ವೈನ್ ಶಾಪ್, ಎಂ ಎಸ್ ಐ ಎಲ್ ಹಾಗೂ ಎಂ ಆರ್ ಪಿ ಅಂಗಡಿಗಳಲ್ಲಿ ಮದ್ಯ ಸ್ಟಾಕ್ ಇದ್ದರೇ ಮಾತ್ರವೇ ಮಾರಾಟಕ್ಕೆ ಅವಕಾಶ ನೀಡಲಾಗುತ್ತದೆ. ಈ ಮೂಲಕ ನಿಮ್ಮ ಜಿಲ್ಲೆ, ನಿಮ್ಮ ಏರಿಯಾ, ನಿಮ್ಮ ಪ್ರದೇಶದಲ್ಲಿ ವೈನ್ ಶಾಪ್, ಎಂ ಎಸ್ ಐ ಎಲ್ ಹಾಗೂ ಎಂ ಆರ್ ಪಿ ಅಂಗಡಿ ಇದ್ರೂ… ಮದ್ಯ ಮಾರಾಟಕ್ಕೆ ತೆರೆಯೋದು, ಮದ್ಯ ಮಾರಾಟ ಮಾಡೋದು ಡೌಟ್ ಆಗಿದೆ.

ಈ ಬಗ್ಗೆ ಅಬಕಾರಿ ಇಲಾಖೆಯ ಮೂಲಕಗಳಿಂದ ಮಾಹಿತಿ ಲಭ್ಯವಾಗಿದ್ದು, ನಾಳೆಯಿಂದ ಮದ್ಯ ಮಾರಾಟ ರಾಜ್ಯದಲ್ಲಿ ಆರಂಭವಾಗಲಿದೆ. ಆದ್ರೇ ವೈನ್ ಶಾಪ್, ಎಂ ಆರ್ ಪಿ ಹಾಗೂ ಎಂ ಎಸ್ ಐ ಎಲ್ ಅಂಗಡಿಗಳಲ್ಲಿ ಮದ್ಯ ಇದ್ಯಾ ಅಂತ ಈಗಾಗಲೇ ಸಂಜೆ 7 ಗಂಟೆಯಿಂದಲೇ ಚೆಕಿಂಗ್ ಆರಂಭ ಆಗಿದೆ. ಇದು ನಾಳೆ ಬೆಳಿಗ್ಗೆ 7 ಗಂಟೆಯವರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ನಡೆಯಲಿದೆ ಎಂಬುದಾಗಿ ತಿಳಿದು ಬಂದಿದೆ.

ಹೀಗೆ ವೈನ್ ಶಾಪ್, ಎಂ ಆರ್ ಪಿ ಶಾಪ್ ಹಾಗೂ ಎಂ ಎಸ್ ಐ ಎಲ್ ಶಾಪ್ ಗಳಲ್ಲಿ ಸ್ಟಾಕ್ ಎಷ್ಟು ಇದೆ ಎಂಬುದರ ಪರಿಶೀಲನೆ ನಂತ್ರದಲ್ಲಿ ನಾಳೆ ಬೆಳಿಗ್ಗೆ 9 ಗಂಟೆಗೆ ಬಾರ್ ಒಪನ್ ಮಾಡಬೇಕಾ ಬ್ಯಾಡವೇ ಎಂಬುದರ ಬಗ್ಗೆ ಆಯಾ ವ್ಯಾಪ್ತಿಯ ಅಬಕಾರಿ ಅಧಿಕಾರಿಗಳು ಅನುಮತಿ ನೀಡಲಿದ್ದಾರೆ. ಸ್ಟಾಕ್ ಇರೋ ವೈನ್ ಶಾಪ್, ಎಂ ಆರ್ ಪಿ ಮತ್ತು ಎಂ ಆರ್ ಪಿ ಎಲ್ ಶಾಪ್ ಮಾತ್ರವೇ ನಾಳೆ ತೆರೆದು ಮದ್ಯ ಮಾರಾಟ ಮಾಡಲಾಗುತ್ತದೆ. ಒಂದು ವೇಳೆ ಸ್ಟಾಕ್ ನಿಮ್ಮ ಏರಿಯಾದ ವೈನ್ ಶಾಪ್, ಎಂ ಆರ್ ಪಿ ಮತ್ತು ಎಂ ಎಸ್ ಐ ಎಲ್ ಶಾಪ್ ನಲ್ಲಿ ಇಲ್ಲ ಅಂದ್ರೆ ಮದ್ಯದ ಅಂಗಡಿ ಒಪನ್ ಆಗೋದು ಇಲ್ಲ. ಮದ್ಯ ಮಾರಾಟವೂ ಇಲ್ಲ. ಈ ಮೂಲಕ ಮದ್ಯ ಪ್ರಿಯರಿಗೆ ಮತ್ತೊಂದು ಶಾಕ್ ಆಗೋದು ಗ್ಯಾರಂಟಿ.

- Advertisement -
spot_img

Latest News

error: Content is protected !!