Saturday, June 29, 2024
Homeತಾಜಾ ಸುದ್ದಿಚುನಾವಣೆಯ ದ್ವೇಷ ಹಿನ್ನೆಲೆ- ಕೊಟ್ಟಿಗೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪಾಪಿಗಳು!..

ಚುನಾವಣೆಯ ದ್ವೇಷ ಹಿನ್ನೆಲೆ- ಕೊಟ್ಟಿಗೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪಾಪಿಗಳು!..

spot_img
- Advertisement -
- Advertisement -

ಚಿಕ್ಕಮಗಳೂರು:ಅಜ್ಜಂಪುರ ತಾಲೂಕಿನ ಜಾವೂರು ಹೊಸಳ್ಳಿಯಲ್ಲಿ ಕೊಟ್ಟಿಗೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ವರದಿಯಾಗಿದೆ.ಚುನಾವಣೆಯ ದ್ವೇಷ ಹಿನ್ನೆಲೆಯಲ್ಲಿ ಗೆದ್ದ, ಸೋತ ಗುಂಪುಗಳ ನಡುವೆ ಘರ್ಷಣೆ ನಡೆದು ಬೆಂಕಿ ಹಚ್ಚಲಾಗಿದೆ.
ದನದ ಕೊಟ್ಟಿಗೆ ಸಂಪೂರ್ಣ ಸುಟ್ಟು ಹೋಗಿದ್ದು 2 ರಾಸುಗಳು ಮೃತಪಟ್ಟಿವೆ. ನಾಲ್ಕೈದು ಜಾನುವಾರುಗಳು ತೀವ್ರವಾದ ಸುಟ್ಟ ಗಾಯಗಳಿಂದ ನರಳುತ್ತಿವೆ.

ಅನ್ಯಾಯವಾಗಿ ಮೂಕ ಪ್ರಾಣಿಗಳು ಚಿತ್ರ ಹಿಂಸೆ ಅನುಭವಿಸುತ್ತಿವೆ.ಜಾವೂರು ಹೊಸಳ್ಳಿಯ ಚಂದ್ರಪ್ಪ ಎಂಬುವವರಿಗೆ ಈ ಕೊಟ್ಟಿಗೆ ಸೇರಿತ್ತು. ಕೊಟ್ಟಿಗೆಯಲ್ಲಿದ್ದ ಕೊಬ್ಬರಿ, ತೆಂಗಿನಕಾಯಿಗಳೂ ಘಟನೆಯಲ್ಲಿ ಭಸ್ಮವಾಗಿವೆ.ಐಘಟನೆಯಿಂದ 5 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದ್ದು ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!