Sunday, June 7, 2026
Homeತಾಜಾ ಸುದ್ದಿಆರ್‌ಐಎಲ್‌ ಸಂಸ್ಥೆ ಹಾಗೂ ಅಧ್ಯಕ್ಷ ಮುಕೇಶ್ ಅಂಬಾನಿ ಮೇಲೆ ಭಾರಿ ಮೊತ್ತದ ದಂಡ

ಆರ್‌ಐಎಲ್‌ ಸಂಸ್ಥೆ ಹಾಗೂ ಅಧ್ಯಕ್ಷ ಮುಕೇಶ್ ಅಂಬಾನಿ ಮೇಲೆ ಭಾರಿ ಮೊತ್ತದ ದಂಡ

- Advertisement -
- Advertisement -

ನವದೆಹಲಿ:ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಅದರ ಅಧ್ಯಕ್ಷ ಮುಕೇಶ್ ಅಂಬಾನಿ ಅವರಿಗೆ ದಂಡ ವಿಧಿಸಿದೆ.2007ರಲ್ಲಿ ಹಿಂದಿನ ರಿಲಯನ್ಸ್ ಪಟ್ರೋಲಿಯಂ ಲಿಮಿಟೆಡ್‌ (ಆರ್‌ಪಿಎಲ್‌) ಕಂಪನಿಯ ಷೇರುಗಳ ಬೆಲೆಯಲ್ಲಿ ಕೃತಕವಾಗಿ ಬದಲಾವಣೆ ತಂದ ಆರೋಪಕ್ಕೆ ಸಂಬಂಧಿಸಿದಂತೆ ಈ ದಂಡ ವಿಧಿಸಲಾಗಿದೆ ಎಂದು ವರದಿಯಾಗಿದೆ.

ಆರ್‌ಐಎಲ್‌ ಸಂಸ್ಥೆಯ ಮೇಲೆ 25 ಕೋಟಿ ದಂಡ ಹಾಗೂ ಅಂಬಾನಿ ಅವರಿಗೆ 15 ಕೋಟಿ ದಂಡವನ್ನು ಸೆಬಿ ವಿಧಿಸಿದೆ. ಅಲ್ಲದೆ, ನವಿ ಮುಂಬೈ ಎಸ್‌ಇಜೆಡ್‌ ಪ್ರೈವೇಟ್ ಲಿಮಿಟೆಡ್ ಕಂಪನಿಯು 20 ಕೋಟಿ ದಂಡ, ಮುಂಬೈ ಎಸ್‌ಇಜೆಡ್‌ ಲಿಮಿಟೆಡ್‌ ಕಂಪನಿಯು 10 ಕೋಟಿ ದಂಡ ಪಾವತಿಸಬೇಕು ಎಂದು ಸೆಬಿ ವಿಜರಡಿಯಲ್ಲಿ ತಿಳಿಸಿದೆ.

- Advertisement -

Latest News

error: Content is protected !!