Wednesday, May 8, 2024
HomeUncategorizedಶ್ರೀ ಚಾಮುಂಡೇಶ್ವರಿ ದೇವಸ್ಥಾನ ಆರಿಕೋಡಿಯಲ್ಲಿ ಸಂಭ್ರಮದ ನವರಾತ್ರಿ ಉತ್ಸವ: 819 ವಾಹನಗಳಿಗೆ ಅಯುಧ ಪೂಜೆ

ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಆರಿಕೋಡಿಯಲ್ಲಿ ಸಂಭ್ರಮದ ನವರಾತ್ರಿ ಉತ್ಸವ: 819 ವಾಹನಗಳಿಗೆ ಅಯುಧ ಪೂಜೆ

spot_img
- Advertisement -
- Advertisement -

ಬೆಳ್ತಂಗಡಿ: ಆಯುಧ ಪೂಜೆ ಪ್ರಯುಕ್ತ ತಾಲೂಕಿನ ಬೆಳಾಲು ಗ್ರಾಮದ ಕಾರ್ಣಿಕ ಕ್ಷೇತ್ರವಾದ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಆರಿಕೋಡಿ ಯಲ್ಲಿ ಇಂದು ನವರಾತ್ರಿ ಪೂಜೆ ನಡೆಯಿತು ಹಾಗೂ ನಾಗತಂಬಿಲ ,ಮಹಾಪೂಜೆ ಮತ್ತು ಆಯುಧ ಪೂಜೆ ನಡೆಯಿತು. ದ್ವಿಚಕ್ರ 517 ವಾಹನ ಹಾಗೂ ಮೂರು ಚಕ್ರ ಮತ್ತು ನಾಲ್ಕು ಚಕ್ರದ 302 ವಾಹನಗಳಿಗೆ ಮತ್ತು ಒಟ್ಟು 819 ವಾಹನಗಳಿಗೆ ಆಯುಧ ಪೂಜೆ ನಡೆಸಲಾಯಿತು.

1200 ಮಹಿಳೆಯರಿಗೆ ರವಿಕೆ ಕಣ ಬಳೆ ವಿತರಿಸಲಾಯಿತು ಹಾಗೂ 900 ಶಾಲಾ ಮಕ್ಕಳಿಗೆ ಪುಸ್ತಕ, ಪೆನ್ ಮತ್ತು 200 ಅಂಗನವಾಡಿ ಮಕ್ಕಳಿಗೆ‌ ಕಡ್ಡಿ, ಬಳಪ ವಿತರಿಸಲಾಯಿತು.

ನವರಾತ್ರಿ ಪ್ರಯುಕ್ತ ದೇವಸ್ಥಾನದ ವತಿಯಿಂದ ಆನ್ ಲೈನ್ ಭಕ್ತಿಗೀತೆ ಸ್ವರ್ಧೆ ನಡೆಸಲಾಗಿದ್ದು ಅದರಲ್ಲಿ ವಿಜೇತರಾದ ಮೊದಲ ಸ್ಥಾನ ಮೋಹನ್ ದಾಸ್ ಕಾಟಿಪಳ್ಳ , ದ್ವೀತಿಯ ಸ್ಥಾನ ವೀಣಾ ಕೊಯ್ಯೂರು ,ತೃತೀಯ ಸ್ಥಾನ ಶ್ರೀರಕ್ಷಾ ಕಬಕ ಪುತ್ತೂರು ಇವರಿಗೆ ಬಹುಮಾನ ನೀಡಲಾಯಿತು ಹಾಗೂ ವಿಶೇಷ ಬಹುಮಾನ ಶಾರ್ವಿ.ಬಿ.ಆರ್.ಕೊಯ್ಯೂರು, ಸ್ಫೂರ್ತಿ ಬೆಳಾಲು, ಸಾನಿಧ್ಯ ಆಚಾರ್ಯ ಇವರಿಗೆ ಬಹುಮಾನ ನೀಡಲಾಯಿತು. ಭಕ್ತಿಗೀತೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.

ದೇವಸ್ಥಾನದ ಮೇಲ್ಚಾವಣಿ ನಿರ್ಮಣಕ್ಕೆ ದೇಣಿಗೆ ನೀಡಿದ 320 ಮಂದಿಗೆ ಸನ್ಮಾನಿಸಿ ಗುರುತಿಸಲಾಯಿತು. ದೇವಸ್ಥಾನದ ಮೊಕ್ತೇಸರಾದ ಡೊಂಬಯ್ಯ ಗೌಡ ಮತ್ತು ಧರ್ಮದರ್ಶಿಗಳಾದ ಹರೀಶ್ ಗೌಡ ಹಾಗೂ ವಸಂತ ಗೌಡ ಪೂಜೆಯನ್ನು ನೆರವೇರಿಸಿದರು. ನವರಾತ್ರಿ ಪೂಜೆಗೆ ಸುಮಾರು 4,500 ಕ್ಕೂ ಸಾವಿರಕ್ಕೂ ಅಧಿಕ ಮಂದಿ ಪೂಜೆಯಲ್ಲಿ ಪಾಲ್ಗೊಂಡಿದ್ದರು.

- Advertisement -
spot_img

Latest News

error: Content is protected !!