Saturday, June 6, 2026
Homeಇತರರಸ್ತೆ ದಾಟುತ್ತಿದ್ದ ವೃದ್ಧರೋರ್ವರಿಗೆ ಆಟೋರಿಕ್ಷಾ ಡಿಕ್ಕಿ...! ಪರಾರಿಯಾಗಲು ಯತ್ನಿಸಿದ ಚಾಲಕನ್ನು ಪತ್ತೆಹಚ್ಚಿದ ಸ್ಥಳೀಯರು...!

ರಸ್ತೆ ದಾಟುತ್ತಿದ್ದ ವೃದ್ಧರೋರ್ವರಿಗೆ ಆಟೋರಿಕ್ಷಾ ಡಿಕ್ಕಿ…! ಪರಾರಿಯಾಗಲು ಯತ್ನಿಸಿದ ಚಾಲಕನ್ನು ಪತ್ತೆಹಚ್ಚಿದ ಸ್ಥಳೀಯರು…!

- Advertisement -
- Advertisement -

ಸುಳ್ಯ: ಬಾಳೆಮಕ್ಕಿಯಲ್ಲಿ ರಸ್ತೆ ದಾಟುತ್ತಿದ್ದ ವೃದ್ಧರೋರ್ವರಿಗೆ ಆಟೋರಿಕ್ಷಾ ಡಿಕ್ಕಿ ಹೊಡೆದು ನಿಲ್ಲಿಸದೆ ಹೋಗಿದ್ದು, ಜನರೇ ಆಟೋವನ್ನು ಪತ್ತೆಹಚ್ಚಿ ಕರೆತಂದಿರುವ ಘಟನೆ ನಡೆದಿದೆ.

ಬಾಳೆಮಕ್ಕಿ ಜೀಪು ನಿಲ್ದಾಣದ ಬದಿಯಿಂದ ರಸ್ತೆ ದಾಟುತ್ತಿದ್ದ ಕೊಯಿಂಗಾಜೆಯ ಕೃಷ್ಣಪ್ಪ ಎಂಬವರು ಆಟೋ ಡಿಕ್ಕಿಯಾಗಿ ಗಾಯಗೊಂಡ ವ್ಯಕ್ತಿ. ಅವರನ್ನು ಸ್ಥಳೀಯರು ಅವರನ್ನು ಆಟೋದಲ್ಲಿ ಕುಳ್ಳಿರಿಸಿ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆಯನ್ನು ಮಾಡಿದರು.

ಗಾಯಗೊಂಡ ವ್ಯಕ್ತಿಯ ಮನೆಯವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದಾಗ ಅವರ ಮನೆಯವರು ಘಟನಾ ಸ್ಥಳಕ್ಕೆ ಬಂದು ಗಾಯಾಳುವನ್ನು ಆಸ್ಪತ್ರೆಗೆ ಚಿಕಿತ್ಸೆಗೆ ಕೊಂಡೊಯ್ದಿದ್ದಾರೆ.

ಗಾಯಾಳುವನ್ನು ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಂದರ ಪಾಟಾಜೆ ಹಾಗೂ ಕಾರ್ಯದರ್ಶಿ ರಾಜೇಶ್ ಕಜೆ ರಸ್ತೆಯಿಂದ ಮೇಲೆತ್ತಲು ಸಹಕರಿಸಿದರು. ಪೈಚಾರು ಮೂಲದ ಅಸೈನ್ , ಹಾಗೂ ತಯಿಬ್ ಎಂಬುವವರು ಆಟೋವನ್ನು ಹಿಂಬಾಲಿಸಿ ಆಟೋ ಚಾಲಕನನ್ನು ರಾಮ ಬಾರ್ ಬಳಿಯಿಂದ ಕರೆದುಕೊಂಡು ಬಂದಿದ್ದಾರೆ. ತನ್ನ ರಿಕ್ಷಾದಲ್ಲಿ ಬಾಡಿಗೆ ಪಾರ್ಟಿ ಇದ್ದುದರಿಂದ, ತಾನು ನಿಲ್ಲಿಸದೆ ಹೋದೆ ಎಂದು ರಿಕ್ಷಾ ಚಾಲಕ ಕರಿಯ ಮೂಲೆಯ ಭಾಸ್ಕರರವರು ತಿಳಿಸಿದ್ದಾರೆ.

- Advertisement -

Latest News

error: Content is protected !!