Saturday, June 6, 2026
Homeಕರಾವಳಿಮಂಗಳೂರು: ನಕಲಿ ಹಾಗೂ ಡಿಫೆಕ್ಟೆಡ್ ನಂಬರ್ ಪ್ಲೇಟ್ ಹಾವಳಿ; ಖುದ್ದು ಫೀಲ್ಡ್ ಗಿಳಿದ ಕಮಿಷನರ್

ಮಂಗಳೂರು: ನಕಲಿ ಹಾಗೂ ಡಿಫೆಕ್ಟೆಡ್ ನಂಬರ್ ಪ್ಲೇಟ್ ಹಾವಳಿ; ಖುದ್ದು ಫೀಲ್ಡ್ ಗಿಳಿದ ಕಮಿಷನರ್

- Advertisement -
- Advertisement -

ಮಂಗಳೂರು: ಪೊಲೀಸ್ ಅಧಿಕಾರಿಗಳು ಸ್ಪೆಷಲ್ ಟ್ರಾಫಿಕ್ ಡ್ರೈವ್ ಆರಂಭಿಸಿದ್ದು, ವಾಹನಗಳ ನಕಲಿ ನಂಬರ್ ಪ್ಲೇಟ್ ಹಾಗೂ ಡಿಫೆಕ್ಟೆಡ್ ನಂಬರ್ ಪ್ಲೇಟ್ ಹಾವಳಿ ಹೆಚ್ಚಾಗಿದೆ.

ಇಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಖುದ್ದು ಫಿಲ್ಡ್ ಗೆ ಇಳಿದು ವಾಹನ ತಪಾಸಣೆ ನಡೆಸಿದ್ದು, ವಾಹನಗಳ ನಕಲಿ ನಂಬರ್ ಪ್ಲೇಟ್ ಹಾಗೂ ಡಿಫೆಕ್ಟೆಡ್ ನಂಬರ್ ಪ್ಲೇಟ್ ಹಾವಳಿ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.

ನಗರದಲ್ಲಿ ನಿನ್ನೆ ಟಿಂಟ್ ಗ್ಲಾಸ್ ಅಳವಡಿಸಿದ ವಾಹನ ಸವಾರರಿಗೆ ದಂಡ ವಿಧಿಸಿದ್ದ ಪೊಲೀಸರು ಇಂದು ನಕಲಿ ನಂಬರ್ ಪ್ಲೇಟ್ ಹಾಗು ಡಿಫೆಕ್ಟೆಡ್ ನಂಬರ್ ಪ್ಲೇಟ್ ಪತ್ತೆಗೆ ನಗರದ ವಿವಿದೆಡೆ ವಾಹನ ತಪಾಸಣೆ ನಡೆಸಿದರು. ಇತ್ತೀಚಿಗೆ ನಕಲಿ ನಂಬರ್ ಪ್ಲೇಟ್ ಬಳಸಿ ಚೈನ್ ಸ್ನ್ಯಾಚಿಂಗ್ ಪ್ರಕರಣಗಳು ಎಸಗುತ್ತಿದ್ದಾರೆ. ಹಾಗಾಗಿ ಇಂದು ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸ್ಪೆಷಲ್ ಟ್ರಾಫಿಕ್ ಡ್ರೈವ್ ಆರಂಭಿಸಲಾಗಿದೆ.

ನಗರದ ವಿವಿಧೆಡೆ ವಾಹನ ತಪಾಸಣೆ ನಡೆಸಿದ ಪೊಲೀಸ್ ಕಮಿಷನರ್, ನಿಯಮ ಉಲ್ಲಂಘಿಸಿದವರಿಗೆ ಬುದ್ದಿವಾದ ಹೇಳಿ ದಂಡ ವಿಧಿಸಿದ್ದಾರೆ. ನಿನ್ನೆ ಒಂದೇ ದಿನ ಟಿಂಟೆಡ್ ಗ್ಲಾಸ್ ಗಳನ್ನು ಹೊಂದಿದ್ದ 550 ಕಾರುಗಳಿಂದ ಒಟ್ಟು 2.50 ಲಕ್ಷ ರೂ. ಗಿಂತ ಹೆಚ್ಚು ದಂಡ ವಸೂಲು ಮಾಡಿದ್ದಾರೆ.

- Advertisement -

Latest News

error: Content is protected !!