Wednesday, June 3, 2026
Homeಕರಾವಳಿಜಿಲ್ಲೆಯಾದ್ಯಂತ ಆಟೋ ಎಲ್‌ಪಿಜಿ ಬೆಲೆ ಏರಿಕೆ ಸಮಸ್ಯೆ; ಎಸ್‌ಡಿಟಿಯುನಿಂದ ಸರಕಾರಕ್ಕೆ ಮನವಿ ಸಲ್ಲಿಕೆ

ಜಿಲ್ಲೆಯಾದ್ಯಂತ ಆಟೋ ಎಲ್‌ಪಿಜಿ ಬೆಲೆ ಏರಿಕೆ ಸಮಸ್ಯೆ; ಎಸ್‌ಡಿಟಿಯುನಿಂದ ಸರಕಾರಕ್ಕೆ ಮನವಿ ಸಲ್ಲಿಕೆ

- Advertisement -
- Advertisement -

ಮಂಗಳೂರು: ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿನ ರಿಕ್ಷಾ ಚಾಲಕರು, ಆಟೋ ಎಲ್ಪಿಜಿ (ಗ್ಯಾಸ್) ಸಮಸ್ಯೆಯಿಂದ ಕಷ್ಟ ಪಡುತ್ತಿದ್ದು, ದುಡಿಯುವ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಸರಕಾರ ಈ ಬಗ್ಗೆ ಗಮನ ಹರಿಸಿ ಕ್ರಮ ವಹಿಸಬೇಕೆಂದು ಸೋಶಿಯಲ್ ಡೆಮೊಕ್ರಾಟಿಕ್ ಟ್ರೇಡ್ ಯೂನಿಯನ್ (ಎಸ್ಬಿಟಿಯು) ಸರಕಾರವನ್ನು ಒತ್ತಾಯಿಸಿದೆ.

ಎಸ್ಬಿಟಿಯು ಜಿಲ್ಲಾ (ಮಂಗಳೂರು ನಗರ)ಅಧ್ಯಕ್ಷ ರಹಿಮಾನ್ ಬೋಳಿಯಾರ್ ಅವರು, ನಗರದ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಆಟೋ ಗ್ಯಾಸ್ ಕೊರತೆಯ ಜತೆಗೆ ಬೆಲೆ ಏರಿಕೆಯಿಂದಾಗಿ ರಿಕ್ಷಾ ಚಾಲಕರು ಮಾತ್ರವಲ್ಲದೆ ಎಲ್ಲಾ ಕ್ಷೇತ್ರದ ದುಡಿಯುವ ವರ್ಗ ತೊಂದರೆ ಅನುಭವಿಸುತ್ತಿದೆ ಎಂದರು.

ಗೋಷ್ಟಿಯಲ್ಲಿ ಮಂಗಳೂರು ಗ್ರಾಮಾಂತರ ವ್ಯಾಪ್ತಿಯ ಅಧ್ಯಕ್ಷ ಸಲೀಂ ಜಿ.ಕೆ., ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಲೀಂ ಆಲಾಡಿ, ಜಿಲ್ಲಾ ಉಪಾಧ್ಯಕ್ಷ ಫಿಲಿಫ್ ಹೆನ್ರಿ ಡಿಸೋಜಾ, ಮುಲಿ ಘಟಕದ ಅಧ್ಯಕ್ಷರಾದ ವಿಶು ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಬೆಂಗ್ರೆ ಉಪಸ್ಥಿತರಿದ್ದರು.

- Advertisement -

Latest News

error: Content is protected !!