- Advertisement -
- Advertisement -
ಉಡುಪಿ: ಶಾಲಾ ವಿದ್ಯಾರ್ಥಿಗೆ ಶಾಲಾ ಆವರಣದೊಳಗೆ ಆಟೋ ಡಿಕ್ಕಿ ಹೊಡೆದು ಗಾಯವಾದ ಘಟನೆ ಅದಮಾರಿನಲ್ಲಿ ಸಂಭವಿಸಿದೆ.
ಕಾಪು ತಾಲೂಕಿನ ಅದಮಾರು ಪೂರ್ಣಪ್ರಜ್ಞ ಆಂಗ್ಲ ಮಾಧ್ಯಮ ಶಾಲೆಯ ಅವರಣದಲ್ಲಿ ಈ ಅಪಘಾತ ನಡೆದಿದ್ದು, ಒಂದನೇ ತರಗತಿ ವಿದ್ಯಾರ್ಥಿ ಭವಿನ್(7) ಗಂಭಿರವಾಗಿ ಗಾಯಗೊಂಡಿದ್ದಾನೆ.
ಗಾಯಾಳು ವಿದ್ಯಾರ್ಥಿ ಭವಿನ್ ಶಾಲಾ ಆವರಣದೊಳಗೆ ಓಡಿ ಬರುತ್ತಿದ್ದಾಗ ಆವರಣ ಪ್ರವೇಶಿಸಿದ್ದ ಆಟೋ ಡಿಕ್ಕಿ ಹೊಡೆದಿದೆ. ಈ ವೇಳೆ ಭವಿನ್ ಜಾರಿ ಆಟೋ ಚಕ್ರದ ಅಡಿಗೆ ಬಿದ್ದಿದ್ದಾನೆ.
ಕಾಲಿಗೆ ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿ ಭವಿನ್ ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು,
ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ.
- Advertisement -