Monday, September 9, 2024
Homeಕರಾವಳಿಆಟೋಚಾಲಕನ ಸಮಯ ಪ್ರಜ್ಞೆ : ಅಪಘಾತದಲ್ಲಿ ಯುವಕನ ತುಂಡಾದ ಕಾಲಿನ ಮರುಜೋಡಣೆ

ಆಟೋಚಾಲಕನ ಸಮಯ ಪ್ರಜ್ಞೆ : ಅಪಘಾತದಲ್ಲಿ ಯುವಕನ ತುಂಡಾದ ಕಾಲಿನ ಮರುಜೋಡಣೆ

spot_img
- Advertisement -
- Advertisement -

ಮಂಗಳೂರು, ಮೇ 4: ಅಪಘಾತದಲ್ಲಿ ಮೊಣಕಾಲಿನ ಕೆಳಭಾಗ ಕತ್ತರಿಸಲ್ಪಟ್ಟು ಪ್ರಾಣಾಪಾಯದಲ್ಲಿದ್ದ ಯುವಕನಿಗೆ ಆರು ಗಂಟೆಗಳ ತುರ್ತು ಶಸ್ತ್ರ ಚಿಕಿತ್ಸೆಯ ಮೂಲಕ ನಗರದ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಕಾಲನ್ನು ಮರುಜೋಡಿಸುವ ಕಾರ್ಯ ನಡೆಸಲಾಗಿದೆ ಎಂದು ಆಸ್ಪತ್ರೆ ಪ್ರಕಟನೆ ತಿಳಿಸಿದೆ.

ಲಾಕ್‌ಡೌನ್ ಹೇರಿಕೆಯಾದ ದಿನದ ಹಿಂದಿನ ದಿನ ನಗರದ ಪಂಪ್‌ವೆಲ್ ಜಂಕ್ಷನ್‌ನಲ್ಲಿ ಅಪಘಾತಕ್ಕೀಡಾಗಿದ್ದ 22ರ ಹರೆಯದ ಯುವಕನನ್ನು ಅಲ್ಲಿದ್ದ ಆಟೋ ಚಾಲಕರು ತುಂಡಾದ ಕಾಲಿನೊಂದಿಗೆ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರು. ಅಪಘಾತದ ಪರಿಣಾಮ ತೀವ್ರಾಗಿದ್ದ ಕಾರಣ ಮೊಣ ಕಾಲಿನಿಂದ ಕೆಳ ಭಾಗದಲ್ಲಿ ತುಂಡಾಗಿದ್ದ ಕಾಲುಗಳನ್ನು ಜೋಡಿಸುವುದು ಅತ್ಯಂತ ಕ್ಲಿಷ್ಟಕರವಾಗಿತ್ತು. ಆಸ್ಪತ್ರೆಯ ಮೈಕ್ರೋಸರ್ಜರಿ ವಿಭಾಗದ ತಜ್ಞ ವೈದ್ಯರಾದ ಡಾ. ಲತೀಶ್‌ರವರು ಡಾ. ವಾಸುದೇವ ರೆಡ್ಡಿ ಹಾಗೂ ಡಾ. ಅನಂತ್ ಸೋಮಯಾಜಿ ನೇತೃತ್ವದ ಅನಸ್ತೇಶಿಯ ತಜ್ಞ ತಂಡ ದೊಂದಿಗೆ ಶಸ್ತ್ರ ಚಿಕಿತ್ಸೆ ನೆರವೇರಿಸಿದ್ದಾರೆ.

ಅಪಘಾತಕ್ಕೀಡಾದ ಯುವಕನನ್ನು ತುಂಡಾದ ಕಾಲಿನೊಂದಿಗೆ ಸಮಯ ಪ್ರಜ್ಞೆಯೊಂದಿಗೆ ಕ್ಷಿಪ್ರವಾಗಿ ಆಸ್ಪತ್ರೆಗೆ ದಾಖಲಿಸಲಾದ ಕಾರಣ ಯುವಕನ ಕಾಲನ್ನು ಮರುಜೋಡಿಸಲು ಸಾಧ್ಯವಾಯಿತು. ಈ ನಿಟ್ಟಿನಲ್ಲಿ ಆಟೋ ರಿಕ್ಷಾ ಚಾಲಕನ ಸಮಯ ಪ್ರಜ್ಞೆಯನ್ನು ಆಸ್ಪತ್ರೆ ವೈದ್ಯಾಧಿ ಕಾರಿಗಳ ತಂಡ ಶ್ಲಾಘಿಸಿದೆ.

ಸದ್ಯ ಶಸ್ತ್ರಚಿಕಿತ್ಸೆಗೊಳಗಾಗಿರುವ ಯುವಕ ಚೇತರಿಸಿದ್ದು, ಕಳೆದ ವಾರ ಮೊಣಕಾಲು ಸಮತಟ್ಟುಗೊಳಿಸುವ ಪ್ರಕ್ರಿಯೆಗೂ ನಡೆಸಲಾಗಿದೆ. ಎರಡು ದಿನಗಳಲ್ಲಿ ಯುವಕ ಆಸ್ಪತ್ರೆಯಿಂದ ಬಿಡುಗಡೆಗೊಳ್ಳಲಿದ್ದಾರೆ ಎಂದು ಆಸ್ಪತ್ರೆ ಪ್ರಕಟನೆ ತಿಳಿಸಿದೆ. 

- Advertisement -
spot_img

Latest News

error: Content is protected !!