- Advertisement -
![]()
- Advertisement -
ಸುಳ್ಯ: ಇಲ್ಲಿನ ಬೆಟ್ಟಂಪಾಡಿಯಲ್ಲಿ ನಡೆದ ಆಟೋನ ಚಾಲಕ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೃತ ವ್ಯಕ್ತಿಯ ತಾಯಿ ಖೈರುನ್ನಿಸಾ ಹಾಗೂ ಸಹೋದರಿ ಎಸ್ಪಿಗೆ ದೂರು ನೀಡಿದ್ದಾರೆ.
ಅ.17 ರಂದು ಸಾವನ್ನಪ್ಪಿದ ಜಬ್ಬಾರ್ ಅವರನ್ನು ರಫೀಕ್ ಪಡು ಮತ್ತು ಆತನ ಸಹಚರರು ಜಬ್ಬಾರ್‌ನನ್ನು ಅಮಾನವೀಯವಾಗಿ ಹೊಡೆದಿದ್ದು ದೇಹದಲ್ಲಿ ಮತ್ತು ತಲೆಯ ಭಾಗದಲ್ಲಿ ತುಂಬಾ ನೋವು ಎಂದು ಒದ್ದಾಡುತ್ತಿದ್ದ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವನು ಮೃತಪಟ್ಟಿದ್ದಾನೆ. ಇದಕ್ಕೆಲ್ಲ ಪಡು ರಫೀಕ್ ಕಾರಣ. ಅವನು ನಮ್ಮ ಮನೆಗೂ ಬಂದು ‘ಜಬ್ಬಾರ್ ತಪ್ಪುಗಳನ್ನು ಮಾಡಿದ್ದಾನೆ, ಅದಕ್ಕಾಗಿ ನಾವು ಗದರಿಸಿದ್ದೇವೆ’ ಎಂದು ವೀಡಿಯೋವನ್ನು ತೋರಿಸಿದ್ದಾರೆ. ಜಬ್ಬಾರ್ ಸಾವಿಗೆ ಕಾರಣ ಆದವರ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
- Advertisement -


