- Advertisement -
- Advertisement -
ಪುತ್ತೂರು: ಕೆರೆಗೆ ಹಾರಿ ಆಟೋ ಚಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಪ್ಯದ ಕೊಲ್ಯ ಎಂಬಲ್ಲಿ ನಡೆದಿದೆ.ಪುರುಷರಕಟ್ಟೆಯ ಪಾಪೆತ್ತಡ್ಕ ನಿವಾಸಿ ಮಹಮ್ಮದ್ ಮೃತ ಆಟೋ ಚಾಲಕ.
ಸಂಪ್ಯದ ಕೊಲ್ಯ ಎಂಬಲ್ಲಿರುವ ಗಣಪತಿ ವಿಗ್ರಹ ವಿಸರ್ಜನೆಯ ಕೆರೆಗೆ ಮಹಮ್ಮದ್ ರವರು ಹಾರಲು ಯತ್ನಿಸಿದ ವೇಳೆ ಸುತ್ತಮುತ್ತಲಿನವರು ಬೊಬ್ಬೆ ಹಾಕಿ ಹಾರದಂತೆ ಹೇಳಿದ್ದಾರೆ. ಆದರೂ ‘ಸಾಯುತ್ತೇನೆ’ ಎಂದು ಹೇಳಿ ಮಹಮ್ಮದ್ ರವರು ಕೆರೆಗೆ ಹಾರಿದ್ದಾರೆ ಎನ್ನಲಾಗಿದೆ. ಪುತ್ತೂರಿನ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -