Friday, June 5, 2026
Homeಕರಾವಳಿಮಂಗಳೂರುಕಡಬ; ದಿಢೀರ್  ನಾಯಿ ಅಡ್ಡ ಬಂದು ಆಟೋ ಪಲ್ಟಿ;ಚಾಲಕನ ಕಾಲಿಗೆ ಗಂಭೀರ ಗಾಯ

ಕಡಬ; ದಿಢೀರ್  ನಾಯಿ ಅಡ್ಡ ಬಂದು ಆಟೋ ಪಲ್ಟಿ;ಚಾಲಕನ ಕಾಲಿಗೆ ಗಂಭೀರ ಗಾಯ

- Advertisement -
- Advertisement -

ಕಡಬ; ದಿಢೀರ್  ನಾಯಿ ಅಡ್ಡ ಬಂದು ಆಟೋ ಪಲ್ಟಿಯಾದ ಪರಿಣಾಮ ಚಾಲಕನ ಕಾಲಿಗೆ ಗಂಭೀರ ಗಾಯಗಳಾಗಿರುವ ಘಟನೆ ಆಲಂಕಾರು ಗ್ರಾಮದ ಸುರುಳಿ ಎಂಬಲ್ಲಿ ನಡೆದಿದೆ.ಆಟೋ ಚಾಲಕ ಸುಬ್ರಹ್ಮಣ್ಯ ನಾಯ್ಕ ಗಾಯಗೊಂಡವರು.ಸುಬ್ರಹ್ಮಣ್ಯ ನಾಯ್ಕ ಅವರು ತನ್ನ ಆಟೋದಲ್ಲಿ ಸುರುಳಿ ಕಡೆಯಿಂದ ಆಲಂಕಾರಿನತ್ತ  ಬರುವತ್ತಿರುವಾಗ  ಸುರುಳಿ ಸೇತುವೆಯ ಬಳಿ ಇಕ್ಕಟ್ಟಾದ ಸ್ಥಳದಲ್ಲಿ ಏಕಾಏಕಿ  ನಾಯಿ ಅಡ್ಡ ಬಂದು ಅಟೋ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.ಚಾಲಕನ‌ ಕಾಲು ಮುರಿತಕ್ಕೆ ಒಳಗಾಗಿ ಗಂಭೀರ ಗಾಯಗೊಂಡು  ಪುತ್ತೂರು ಖಾಸಗಿ  ಆಸ್ಪತ್ರೆಗೆ  ದಾಖಲಾಗಿ ಬಳಿಕ ಹೆಚ್ಚಿನ‌ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದಾರೆ.ಆಟೋದಲ್ಲಿ ಚಾಲಕ ಮಾತ್ರ ಇದ್ದು, ಪ್ರಯಾಣಿಕರು ಇಲ್ಲದೆ ಇದ್ದದ್ದರಿಂದ ಇನ್ನಷ್ಟು ಅಪಾಯ ತಪ್ಪಿದೆ.

- Advertisement -

Latest News

error: Content is protected !!