Saturday, June 13, 2026
Homeತಾಜಾ ಸುದ್ದಿಕಡಬದಲ್ಲೊಂದು ಬೆಚ್ಚಿ ಬೀಳಿಸುವ ಘಟನೆ; ತಮ್ಮನಿಂದಲೇ ಪೆಟ್ರೋಲ್ ಸುರಿದು ಅಣ್ಣನ ಕೊಲೆಗೆ ಯತ್ನ

ಕಡಬದಲ್ಲೊಂದು ಬೆಚ್ಚಿ ಬೀಳಿಸುವ ಘಟನೆ; ತಮ್ಮನಿಂದಲೇ ಪೆಟ್ರೋಲ್ ಸುರಿದು ಅಣ್ಣನ ಕೊಲೆಗೆ ಯತ್ನ

- Advertisement -
- Advertisement -

ಕಡಬದ ಕೋಡಿಂಬಾಳದ ಕೊರಿಯರ್ ಬಳಿ ಬೆಚ್ಚಿ ಬೀಳಿಸುವ ಘಟನೆಯೊಂದು ಜೂ.8 ರ ಸಂಜೆ ನಡೆದಿದೆ. ತಮ್ಮನೇ ಪೆಟ್ರೋಲ್ ಸುರಿದು ಅಣ್ಣನ ಕೊಲೆ ಯತ್ನಿಸಿದ್ದಾನೆ..

ಗದಗ ಮೂಲದ ಅಣ್ಣ ತಮ್ಮಂದಿರು ಪುತ್ತೂರಿನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಜೂ.8 ರ  ಮಧ್ಯಾಹ್ನ ಮಂಗಳೂರು- ಬೆಂಗಳೂರು ರೈಲು ಮಾರ್ಗ ದಲ್ಲಿ ಸಂಚರಿಸುವ ಪ್ಯಾಸೆಂಜರ್ ರೈಲಿನಲ್ಲಿ ಪುತ್ತೂರಿನಲ್ಲಿ ಹತ್ತಿದ್ದರು. ಬಳಿಕ ಜೊತೆಯಾಗಿ ಬಂದು ಕಡಬ ಬಜಕೆರೆ ರೈಲ್ವೆ ನಿಲ್ದಾಣದಲ್ಲಿ ಇಬ್ಬರು ಇಳಿದಿದ್ದರು.

ರೈಲು ಹೋದ ಬಳಿಕ ಸುಮಾರು 500_ಮೀ ಮುಂದಕ್ಕೆ ಕರೆದುಕೊಂಡು ಬಂದು  ತಮ್ಮ ನಿಂಗಪ್ಪ ಎಂಬಾತ ಅಣ್ಣ ಹನುಮಪ್ಪ  (45)ನಿಗೆ ಏಕಾಏಕಿ ತನ್ನ ಕೈಯಲ್ಲಿದ್ದ ಪೆಟ್ರೋಲ್ ಅನ್ನು ಅಣ್ಣನ  ಮೇಲೆ ಎರಚಿ ಬೆಂಕಿ ಹಚ್ಚಿದ್ದಾನೆ. ಹನುಮಪ್ಪನ ಕೂಗಾಟ ಕೇಳಿದ ಸ್ಥಳೀಯರು ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ಕಡಬ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಮಂಗಳೂರಿಗೆ ಕರೆದುಕೊಂಡು ಹೋಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತಮ್ಮ ನಿಂಗಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಂಗಳೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!