Wednesday, June 24, 2026
Homeಕರಾವಳಿಉಡುಪಿಕೋಟ: ಇಸ್ಪೀಟು ಅಡ್ಡೆಗೆ ದಾಳಿ: ಆರು ಮಂದಿ ಪೊಲೀಸರ ವಶಕ್ಕೆ

ಕೋಟ: ಇಸ್ಪೀಟು ಅಡ್ಡೆಗೆ ದಾಳಿ: ಆರು ಮಂದಿ ಪೊಲೀಸರ ವಶಕ್ಕೆ

- Advertisement -
- Advertisement -

ಕೋಟ : ಹಳ್ಳಾಡಿ ಹರ್ಕಾಡಿ ಗ್ರಾಮದ ಸಾರ್ವಜನಿಕ ಖಾಲಿ ಪ್ರದೇಶದಲ್ಲಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು 6 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದಿವಾಕರ (30), ಶರತ್ (24), ಮಧುಕರ (25), ಕೇಶವ (47), ಹರೀಶ (29), ಭಾಸ್ಕರ ಮೊಗವೀರ (49) ಪೊಲೀಸರು ವಶಕ್ಕೆ ಪಡೆದ ಜುಗಾರಿ ನಿರತರು.

ಹಳ್ಳಾಡಿ ಹರ್ಕಾಡಿಯ ಸಾರ್ವಜನಿಕ ಖಾಲಿ ಪ್ರದೇಶದಲ್ಲಿ ಇಸ್ಪೀಟು ಆಡುತ್ತಿರುವ ಬಗ್ಗೆ ಮಾಹಿತಿ ಪಡೆದ ಕೋಟ ಠಾಣೆಯ ಎಎಸ್ಐ ಗಣೇಶ್ ಪೈ ಅವರು ಇತರ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದಾಗ ಕೆಲವರು ಸೇರಿಕೊಂಡು ಇಸ್ಪಿಟ್ ಜುಗಾರಿ ಆಟದಲ್ಲಿ ನಿರತರಾಗಿರುವುದು ಕಂಡುಬಂದಿದೆ. ಈ ವೇಳೆ ಜುಗಾರಿಯಲ್ಲಿ ನಿರತರಾಗಿದ್ದ 6 ಮಂದಿಯನ್ನು ವಶಕ್ಕೆ ಪಡೆದು ಅವರ ಬಳಿ ಇದ್ದ 3,400 ರೂ. ನಗದು ಹಾಗೂ ಇಸ್ಪೀಟು ಜುಗಾರಿ ಆಟಕ್ಕೆ ಬಳಸುವ ಇತರ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!