Friday, August 7, 2026
Homeಕರಾವಳಿಉಡುಪಿಉಡುಪಿ: ಸಾಲದ ಹಣ ಕೇಳಲು ಹೋದ ಯುವಕನಿಗೆ ಮರಕ್ಕೆ ಕಟ್ಟಿ ಹಲ್ಲೆ :ಇಬ್ಬರ ಬಂಧನ

ಉಡುಪಿ: ಸಾಲದ ಹಣ ಕೇಳಲು ಹೋದ ಯುವಕನಿಗೆ ಮರಕ್ಕೆ ಕಟ್ಟಿ ಹಲ್ಲೆ :ಇಬ್ಬರ ಬಂಧನ

- Advertisement -
- Advertisement -

ಉಡುಪಿ: ಕುಂದಾಪುರ ತಾಲೂಕಿನ ಬೆಳ್ಳಾಲ ಗ್ರಾಮದಲ್ಲಿ ಸಾಲದ ಹಣ ಕೇಳಲು ತೆರಳಿದ್ದ ಯುವಕನನ್ನು ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಸನತ್‌ ಎಂಬ ಯುವಕ ಹಾಗೂ ಯುವತಿ ಒಂದೇ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಪರಸ್ಪರ ಪರಿಚಯ ಬೆಳೆದು, ಬಳಿಕ ಯುವತಿ ಸನತ್‌ನಿಂದ ₹50 ಸಾವಿರ ಸಾಲ ಪಡೆದಿದ್ದಳು ಎನ್ನಲಾಗಿದೆ. ನಂತರ ಕೆಲಸ ತೊರೆದ ಯುವತಿ, ಸನತ್‌ನ ಸಂಪರ್ಕದಿಂದ ದೂರ ಉಳಿದಿದ್ದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಸಾಲದ ಹಣ ವಾಪಸ್ ಕೇಳಿದಾಗ ಮನೆಗೆ ಬರುವಂತೆ ಯುವತಿ ತಿಳಿಸಿದ್ದಾಳೆ ಎನ್ನಲಾಗಿದ್ದು, ಅದರಂತೆ ಮನೆಗೆ ತೆರಳಿದ ಸನತ್‌ನನ್ನು ಕುಟುಂಬದವರು ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಇದೇ ವೇಳೆ ಸನತ್ ವಿರುದ್ಧವೂ ಅಟ್ರಾಸಿಟಿ ಕಾಯ್ದೆ ಹಾಗೂ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ ದಾಖಲಿಸಲಾಗಿದೆ ಎನ್ನಲಾಗಿದೆ.ಈ ಕುರಿತು ಸನತ್ ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಕುಮಾರ್ ಹಾಗೂ ನಂದೀಶ್ ಕುಮಾರ್ ಅವರನ್ನು ಬಂಧಿಸಲಾಗಿದೆ.

- Advertisement -

Latest News

error: Content is protected !!