Thursday, June 4, 2026
Homeಕರಾವಳಿಕಡಬ; ಮಾತು ಬಾರದ, ಕಿವಿ ಕೇಳದ ಕಾರ್ಮಿಕನ ಮೇಲೆ ಹಲ್ಲೆ

ಕಡಬ; ಮಾತು ಬಾರದ, ಕಿವಿ ಕೇಳದ ಕಾರ್ಮಿಕನ ಮೇಲೆ ಹಲ್ಲೆ

- Advertisement -
- Advertisement -

ಕಡಬ; ಮಾತು ಬಾರದ, ಕಿವಿ ಕೇಳದ ಕಾರ್ಮಿಕನ ಮೇಲೆ ಹಲ್ಲೆ ನಡೆಸಿರುವ ಘಟವೆ ನೆಲ್ಯಾಡಿಯಲ್ಲಿ ನಡೆದಿದೆ. ದಾರಿಯಲ್ಲಿ ನಡೆದು ಹೋಗುತ್ತಿದ್ದ  ಕಾರ್ಮಿಕರೊಬ್ಬರ ಮೇಲೆ ಎನ್ನಲಾಗಿದ್ದು, ಗಾಯಗೊಂಡ ಕಾರ್ಮಿಕ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ನೆಲ್ಯಾಡಿ ಸೈಂಟ್ ಜಾರ್ಜ್ ಕಾಲೇಜು ಬಳಿ ಸಿಮೆಂಟ್ ಇಟ್ಟಿಗೆ ತಯಾರಿಕ ಘಟಕವಾದ ನಯನ ಟ್ರೇಡರ್ಸ್ ನ ಕೂಲಿ ಕಾರ್ಮಿಕ ಉತ್ತರ ಪ್ರದೇಶ ಮೂಲದ ಲಡ್ಡು(34)ರವರು ಗಾಯಗೊಂಡವರು.ಲಡ್ಡು ಅವರಿಗೆ ಕಿವಿ ಕೇಳಿಸಲ್ಲ ಹಾಗೂ ಮಾತು ಬರಲ್ಲ. ತಮ್ಮ ಮೇಲೆ ಹಲ್ಲೆಯಾಗಿರೋದನ್ನು ಲಡ್ಡು ಅವರು  ಘಟನೆಯನ್ನು ಹಿಂದಿಯಲ್ಲಿ ಬರೆದಿದ್ದಾರೆ. 

 ನಾನು ಸುಮಾರು 10 ವರ್ಷಗಳಿಂದ ನೆಲ್ಯಾಡಿ ವಿ ಜೆ ಜೋಸೆಪ್ ಅವರ ಮಾಲಕತ್ವದದ ನಯನ ಟ್ರೇಡರ್‍ಸ್‌ನಲ್ಲಿ ಕೆಲಸ ಮಾಡುತ್ತಿದ್ದು, ಜೂ. 13ರಂದು ಬೆಳಿಗ್ಗೆ ಕೆಲಸ ಮುಗಿಸಿ ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ವೇಳೆ  ತಂಡ  ಅವಾಚ್ಯ ಶಬ್ದಗಳಿಂದ ನಿಂದಿಸಿ, ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ’ ಎಂದು ಆರೋಪಿಸಿದ್ದಾರೆ.  ಜಾಗದ ವಿಚಾರಕ್ಕೆ ಸಂಬಂಧಿಸಿ ಈ ಹಲ್ಲೆ ನಡೆದಿದೆ ಎನ್ನಲಾಗಿದೆ.

- Advertisement -

Latest News

error: Content is protected !!