Friday, June 5, 2026
Homeಕರಾವಳಿಮಂಗಳೂರು: ಮಂಗಳಮುಖಿಗೆ ನಾಲ್ಕು ಮಂದಿಯಿಂದ ಹಲ್ಲೆ; ಪ್ರಕರಣ ದಾಖಲು

ಮಂಗಳೂರು: ಮಂಗಳಮುಖಿಗೆ ನಾಲ್ಕು ಮಂದಿಯಿಂದ ಹಲ್ಲೆ; ಪ್ರಕರಣ ದಾಖಲು

- Advertisement -
- Advertisement -

ಮಂಗಳೂರು: ಮಂಗಳಮುಖಿಗೆ ನಾಲ್ಕು ಮಂದಿ ಹಲ್ಲೆ ಮಾಡಿರುವ ಘಟನೆ ಮಂಗಳೂರಿನ ಕುಂಟಿಕಾನ ಬಳಿ ನಡೆದಿದೆ. ಈ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

ಮೊನ್ನೆ ಮಧ್ಯರಾತ್ರಿ ಮಂಗಳಮುಖಿಯ ಬಳಿ ಬಂದ ನಾಲ್ಕು ಮಂದಿ ಯುವಕರು ವ್ಯವಹಾರ ಕುದುರಿಸಿದ ಬಳಿಕ ‘ನಿನಗೆ ಅಷ್ಟು ದುಡ್ಡು ಯಾಕೆ ಕೋಡಬೇಕು? ಎಂದು ಕೇಳಿ ಅವಾಚ್ಯ ಶಬ್ದದಿಂದ ಬೈದಿರುವುದಲ್ಲದೆ, ಒಬ್ಬ ಕಲ್ಲಿ ನಿಂದ ತಲೆಗೆ, ಇನ್ನೊಬ್ಬ ಪೈಪ್‌ನಿಂದ ಬೆನ್ನಿಗೆ ಹೊಡೆದು ಮತ್ತಿಬ್ಬರು ಕಲ್ಲು ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ.

ಈ ವೇಳೆ ಮಂಗಳಮುಖಿಯ ಬ್ಯಾಗ್ ನೆಲಕ್ಕೆ ಬಿದ್ದಿದ್ದು, ಅದರಲ್ಲಿದ್ದ 6000 ರೂ. ಕಳವಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಯುವಕರು ಹಲ್ಲೆ ನಡೆಸಿದ್ದರಿಂದ ಮಂಗಳಮುಖಿಗೆ ಗಾಯವಾಗಿದ್ದು, ಮಾಹಿತಿ ತಿಳಿದ ಇನ್ನೋರ್ವ ಮಂಗಳಮುಖಿಯು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!