Friday, June 5, 2026
Homeಕರಾವಳಿಬೆಳ್ತಂಗಡಿ:ಕಾರು ಮತ್ತು ರಿಕ್ಷಾ ನಡುವೆ ಅಪಘಾತ, ಐವರಿಗೆ ಗಂಭೀರ ಗಾಯ

ಬೆಳ್ತಂಗಡಿ:ಕಾರು ಮತ್ತು ರಿಕ್ಷಾ ನಡುವೆ ಅಪಘಾತ, ಐವರಿಗೆ ಗಂಭೀರ ಗಾಯ

- Advertisement -
- Advertisement -

ಬೆಳ್ತಂಗಡಿ: ಕಾರು ಮತ್ತು ರಿಕ್ಷಾ ನಡುವೆ ಅಪಘಾತ ಸಂಭವಿಸಿ ಐವರು ಗಂಭೀರ ಗಾಯಗೊಂಡ ಘಟನೆ ಬೆಳ್ತಂಗಡಿಯ ಪೆರಿಂಜೆ ಬಳಿ ನಡೆದಿದೆ.

ತುಮಕೂರು ಮೂಲದ ಕುಟುಂಬ ಧರ್ಮಸ್ಥಳ ಕ್ಷೇತ್ರದ ದರ್ಶನ ಮುಗಿಸಿ ಕಟೀಲಿಗೆ ಕಾರಿನಲ್ಲಿ ತೆರಳುವಾಗ ಪೆರಿಂಜೆ ಬಳಿ ಕಾಂನ್ನಂಗಾರ್ ನಿಂದ ಗೇರುಕಟ್ಟೆ ತೆರಳುತ್ತಿದ್ದ ರಿಕ್ಷಾ ಮುಖಾಮುಖಿಯಾಗಿ ಢಿಕ್ಕಿಯಾಗಿದೆ.

ಅಪಘಾತದ ರಭಸಕ್ಕೆ ರಿಕ್ಷಾದಲ್ಲಿದ್ದ ಇಬ್ಬರು ಯುವತಿಯರು, ಮಗು ಹಾಗೂ ಓರ್ವ ಮಹಿಳೆ ಸೇರಿ ಐವರಿಗೆ ಗಾಯವಾಗಿದೆ. ಮಗುವಿನ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Latest News

error: Content is protected !!