Wednesday, June 3, 2026
Homeಕರಾವಳಿಉಡುಪಿರಾಮ್ ಸೇನಾ ಕಾರ್ಯಕರ್ತನ ಮೇಲೆ ಹಲ್ಲೆ, ಆರೋಪಿಗಳನ್ನು ಕೂಡಲೇ ಬಂಧಿಸಿ : ದಕ್ಷಿಣ ಕನ್ನಡ ಜಿಲ್ಲಾ...

ರಾಮ್ ಸೇನಾ ಕಾರ್ಯಕರ್ತನ ಮೇಲೆ ಹಲ್ಲೆ, ಆರೋಪಿಗಳನ್ನು ಕೂಡಲೇ ಬಂಧಿಸಿ : ದಕ್ಷಿಣ ಕನ್ನಡ ಜಿಲ್ಲಾ ರಾಮ್ ಸೇನಾ ಆಕ್ರೋಶ !

- Advertisement -
- Advertisement -

ಮಂಗಳೂರು: ವ್ಯಕ್ತಿಯೊಬ್ಬನನ್ನು ಉಡುಪಿಯ ರಾಜಾಂಗಣಕ್ಕೆ ವಾಹನದ ಇನ್ಸೂರೆನ್ಸ್ ನೆಪದಲ್ಲಿ ಕರೆಸಿಕೊಂಡ ದುಷ್ಕರ್ಮಿಗಳು ಏಕಾಏಕಿ ರಾಡ್ ನಿಂದ ಹಲ್ಲೆ ನಡೆಸಿದ್ದು ರಾಮ್ ಸೇನಾ ಸಂಘಟನೆಯು ಈ ಘಟನೆಯನ್ನು ಖಂಡಿಸಿದೆ. ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ವ್ಯಕ್ತಿ ಉಡುಪಿ ರಾಮ್ ಸೇನಾ ಕಾರ್ಯಕರ್ತ ಬಸವರಾಜ್ ಎಂದು ಮಾಹಿತಿ ಲಭ್ಯವಾಗಿದೆ.

ಈ ಹಲ್ಲೆಯ ಘಟನೆ ಬಗ್ಗೆ ರಾಮ್ ಸೇನಾ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಕಿರಣ್ ಅಮೀನ್ ಉರ್ವ ಸ್ಟೋರ್ ಮಾತನಾಡಿ ” ಇದೊಂದು ರಾಜಕೀಯ ಪ್ರೇರಿತ ದಾಳಿಯಾಗಿದ್ದು ನಮ್ಮ ಕಾರ್ಯಕರ್ತನ ಮೇಲೆ ಯಾರೇ ಹಲ್ಲೆ ನಡೆಸಿದರೂ ಯಾವುದೇ ಜಾತಿ-ಮತ ಪಕ್ಷ ನೋಡದೇ ಖಂಡಿಸುತ್ತೇವೆ ರಾಜಕೀಯ ಕಾರಣಕ್ಕಾಗಿ ನಮ್ಮ ಸಂಘಟನೆಯ ಕಾರ್ಯಕರ್ತರ ಮೇಲೆ ನಡೆಸುವ ದಾಳಿಯನ್ನು ಯಾವುದೇ ಕಾರಣಕ್ಕೂ ನಾವು ಸಹಿಸಿಕೊಳ್ಳಲು ಸಾಧ್ಯವಿಲ್ಲ, ನಮ್ಮವರ ಮೇಲೆ ಹಲ್ಲೆ ಮಾಡಿದವರನ್ನು ಕೂಡಲೇ ಬಂಧಿಸಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ರಾಮ್ ಸೇನಾ ಕಾರ್ಯಕರ್ತರು ಬೀದಿಗಿಳಿದು ತೀವ್ರವಾದ ಹೋರಾಟವನ್ನು ನಡೆಸಲಾಗುವುದು ಹಾಗೂ ಮುಂದೆ ನಡೆಯುವ ಎಲ್ಲಾ ಘಟನೆಗಳಿಗೂ ಜಿಲ್ಲಾಡಳಿತ ಹಾಗೂ ಪೋಲಿಸ್ ಇಲಾಖೆ ನೇರ ಕಾರಣವಾಗಿರುತ್ತಾರೆ ” ಎಂದು ಏಚ್ಚರಿಕೆ ನೀಡಿದ್ದಾರೆ.

- Advertisement -

Latest News

error: Content is protected !!